ಮಡಿಕೇರಿ ಮೇ 25 NEWS DESK : ಹುದೂರು ಶ್ರೀ ಭಗವತಿ ಹಾಗೂ ಶ್ರೀ ಭದ್ರಕಾಳಿ ದೇವರ ವಾರ್ಷಿಕ ಬೋಡ್ ನಮ್ಮೆಯು ಶ್ರದ್ಧಾಭಕ್ತಿಯಿಂದ ನಡೆಯಿತು.
ಅಡ್ಡಂಡ ಬಲ್ಯಮನೆ ಸಮೀಪದ ಅಂಬಲದಿಂದ ಕುದುರೆ ಹಾಗೂ ಮೊಗ ಹೊರಟು ಸಿಐಟಿ ಕಾಲೇಜು ಸಮೀಪವಿರುವ ಶ್ರೀ ಭಗವತಿ ದೇವಸ್ಥಾನದಲ್ಲಿ ಹರಕೆ ಕಾಣಿಕೆಗಳನ್ನು ಸಲ್ಲಿಸಲಾಯಿತು. ನಾಡ್ ತಕ್ಕರಾದ ಪ್ರಕಾಶ್ ಕುಶಾಲಪ್ಪ ಹಾಗೂ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಡ್ಡಂಡ ಡಾಲಿ ಜನಾರ್ಧನ ಮುಂದಾಳತ್ವದಲ್ಲಿ ನಡೆಯಿತು.
ಎರಡು ದಿನಗಳ ಕಾಲ ನಡೆದ ಬೋಡ್ನಮ್ಮೆಯಲ್ಲಿ ಈ ಹಿಂದಿನ ಸಂಪ್ರದಾಯದಂತೆ ಈ ಬಾರಿ ಹಳ್ಳಿಗಟ್ಟು, ಹುದೂರು ಗ್ರಾಮಸ್ಥರು ಪಾಲ್ಗೊಂಡಿರುವುದು ವಿಶೇಷ.
ದೇವಸ್ಥಾನ ಅಭಿವೃದ್ಧಿ ಸಮೀತಿ ಸದಸ್ಯರು, ಊರು ತಕ್ಕರು ಸೇರಿದಂತೆ ವಿವಿಧ ಕುಟುಂಬಸ್ಥರು ಪಾಲ್ಗೊಂಡಿದ್ದರು.