
ಮಡಿಕೇರಿ ಮೇ 27 NEWS DESK : ಮಾನ್ಸೂನ್ ಆರಂಭಕ್ಕೆ ಇನ್ನು ನಾಲ್ಕೇ ದಿನ ಬಾಕಿ ಉಳಿದಿದೆ. ರಾಜ್ಯವ್ಯಾಪಿ ಕಳೆದ ಎರಡು ವಾರಗಳಿಂದ ಉತ್ತಮ ಮಳೆಯಾಗುತ್ತಿದೆ. ಆದರೆ ಮಳೆಗಾಲದ ಮಳೆ ಮೇ ಮೇ 31 ರಿಂದ ಆರಂಭಗೊಳ್ಳಲಿದೆ ಎಂದು ಹವಾಮಾನ ತಿಳಿಸಿದೆ. ಕೊಡಗು, ಕರಾವಳಿ ಸೇರಿದಂತೆ ರಾಜ್ಯದ ಬಹುತೇಕ ಕಡೆ ಮುಂದಿನ ವಾರದಿಂದ ಮಳೆ ಆರಂಭಗೊಳ್ಳಲಿದೆ. ಚಂಡಮಾರುತದಿಂದ ವ್ಯತ್ಯಾಸಗಳಾದರೆ ಮುಂಗಾರು ನಾಲ್ಕೈದು ದಿನ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಎಲ್ಲಾ ಜಿಲ್ಲೆಗಳಲ್ಲಿಯೂ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ, ವಿಶೇಷವಾಗಿ ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳ ಕರ್ನಾಟಕದಲ್ಲಿ ಹೆಚ್ಚು ಮಳೆಯಾಗಲಿದೆ. ಒಟ್ಟಿನಲ್ಲಿ ಜೂನ್ 5 ರ ನಂತರ ರಾಜ್ಯವ್ಯಾಪಿ ಉತ್ತಮ ಮಳೆಯನ್ನು ನಿರೀಕ್ಷಿಸಲಾಗಿದೆ.











