ಮಡಿಕೇರಿ ಮೇ 28 NEWS DESK : ಸೊರಬ ವಿಧಾನಸಭಾ ಕ್ಷೇತ್ರದ ಮೂಡಿ ಹಾಗೂ ಆನವಟ್ಟಿ ಮಹಾಶಕ್ತಿ ಕೇಂದ್ರದಲ್ಲಿ ನೈರುತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ್ ಸರ್ಜಿ ಪರವಾಗಿ ಮತಯಾಚನೆ ನಡೆಯಿತು.
ಇದೆ ಜೂ.3 ರಂದು ನಡೆಯಲಿರುವ ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಅಂಗವಾಗಿ ಡಾ.ಧನಂಜಯ್ ಸರ್ಜಿ ಪರವಾಗಿ ಹಾಗೂ ಮೈತ್ರಿ ಪಕ್ಷದ ಜೆಡಿಎಸ್ ಅಭ್ಯರ್ಥಿ ಭೋಜೇಗೌಡರ ಪರವಾಗಿ ಮತದಾರರ ಮನೆ ಮನೆಗೆ ಭೇಟಿ ನೀಡಿ ಮತ ಯಾಚಿಸಲಾಯಿತು.
ಈ ಸಂದರ್ಭ ಸೊರಬ ಮಂಡಲದ ಅಧ್ಯಕ್ಷ ಪ್ರಕಾಶ್ ತಲ್ಕಾಲುಕೊಪ್ಪ, ವಿಭಾಗದ ಸಹ ಸಂಘಟನಾ ಕಾರ್ಯದರ್ಶಿ ನಟರಾಜ್ , ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಅಗಸನಹಳ್ಳಿ, ಸ್ಥಳೀಯ ಮುಖಂಡ ವಿನಯ್ ಶೆರ್ವಿ, ಶಿವನ ಗೌಡ್ರು, ಕೊಟ್ರೇಶ ಸ್ವಾಮಿ, ಹೊನ್ನಪ್ಪ ವಿನಯ ಗುತ್ತೇರ್, ಕರಿಯಪ್ಪ, ವಿಶ್ವನಾಥ್ ಹಾಗೂ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.