ಸುಂಟಿಕೊಪ್ಪ ಮೇ 29 NEWS DESK : ಸುಂಟಿಕೊಪ್ಪ ಗ್ರಾ.ಪಂ ಮತ್ತು ಕೊಡಗು ಜಿಲ್ಲಾ ಕಾರ್ಮಿಕರ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಕಟ್ಟಡ ಕಾರ್ಮಿಕರಿಗೆ ಮತ್ತು ಇತರೆ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಸುಂಟಿಕೊಪ್ಪ ಗ್ರಾ.ಪಂ ಕಚೇರಿಯಲ್ಲಿ ನಡೆದ ಶಿಬಿರದಲ್ಲಿ ನುರಿತ ವೈದ್ಯರಿಂದ ಕಣ್ಣು, ಕಿವಿ, ಹೃದಯ, ಲಿವರ್, ಕಿಡ್ನಿಯ ಕಾರ್ಯ ಕ್ಷಮತೆಯನ್ನು ಮತ್ತು ಬಿ.ಪಿ, ಶುಗರ್ ಪರೀಕ್ಷಿಸಿ ಸೂಕ್ತ ಮಾರ್ಗದರ್ಶನ ನೀಡಲಾಯಿತು. ಅಲ್ಲದೆ ಅಗತ್ಯವಿರುವವರಿಗೆ ಔಷಧಿ ನೀಡಲಾಯಿತು.
ಡಾ. ಜಿ.ಎಸ್.ಸಚಿನ್, ನೇತ್ರ ತ್ರಜ್ಞ ಪ್ರಕಾಶ್, ಶ್ರವಣ ತ್ರಜ್ಞರಾದ ಪಿ.ಎಚ್.ಮೋನಿಶಾ, ಲ್ಯಾನ್ಸಿ, ರೇಷ್ಮ ಪರ್ವೀನ್, ಟಿ.ಕೆ.ಮೋನಿಕಾ, ಟಿ.ಎಲ್.ಯಶ್ವಂತ್ ಶಿಬಿರವನ್ನು ನಡೆಸಿಕೊಟ್ಟರು.
ಸುಂಟಿಕೊಪ್ಪ ವ್ಯಾಪ್ತಿಯ ನೊಂದಾಯಿತ 70ಕ್ಕೂ ಹೆಚ್ಚು ಮಂದಿ ಕಟ್ಟಡ ಕಾರ್ಮಿಕರು ಹಾಗೂ ಕುಟುಂಬಸ್ಥರು ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡಿದ್ದರು.