
ಸುಂಟಿಕೊಪ್ಪ ಜೂ.3 NEWS DESK : ಸುಂಟಿಕೊಪ್ಪದ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ ಭಾನುವಾರ ನಡೆದಿದ್ದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸ್ಕೂಟಿ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೆದಕಲ್ ಗ್ರಾಮದ ಏಳನೇ ಮೈಲು ನಿವಾಸಿ ಇಬ್ರಾಹಿಂ (60) ಮೃತ ದುರ್ದೈವಿ. ಸುಂಟಿಕೊಪ್ಪದಿಂದ ಕುಶಾಲನಗರದತ್ತ ತೆರಳುತ್ತಿದ್ದ ಸ್ಕೂಟಿಗೆ ಹಿಂಬದಿಯಲ್ಲಿ ಬರುತ್ತಿದ್ದ ಕೇರಳ ಕಣ್ಣೂರಿನ ಇನ್ನೋವಾ ಕಾರು ಡಿಕ್ಕಿಯಾಗಿತ್ತು. ಗಾಯಾಳು ಇಬ್ರಾಹಿಂ ಅವರನ್ನು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಆಗಲಿದ್ದಾರೆ.








