ಕಡಂಗ ಜೂ.4 NEWS DESK : ಎಸ್ ಎಸ್ ಎಫ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲೆಯ ಅಧೀನದಲ್ಲಿರುವ ಡಿವಿಷನ್ ಹಾಗೂ ಸೆಕ್ಟರ್ ಸಮಿತಿಗಳ ನಾಯಕರ ಕ್ಯಾಂಪ್ ಹಾಗೂ ಜಿಲ್ಲಾ ಸಮಿತಿಯ ಕೌನ್ಸಿಲ್ ಸಭೆಯು ಕೊಂಡಂಗೇರಿಯ ಶಾದಿ ಮಹಲ್ ನಲ್ಲಿ ನಡೆಯಿತು.
ರಾಜ್ಯ ಸಮಿತಿ ಸದಸ್ಯರಾದ ಆರಿಫ್ ಸಖಾಫಿ ನೇತೃತ್ವದಲ್ಲಿ ಜಿಲ್ಲಾ ಕೌನ್ಸಿಲ್ ನಡೆಯಿತು.
ಸಯ್ಯಿದುನಾ ಅಬ್ದುಲ್ಲಾಹಿ ಸಖಾಫ್ ಹಳ್ರಮಿ ಅವರ ಝಿಯಾರತ್ ನೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಎಸ್.ಎಸ್.ಎಫ್ ಮಾಜಿ ರಾಜ್ಯ ಕಾರ್ಯದರ್ಶಿ ಮುಬಶ್ಶಿರ್ ಅಹ್ಸನಿ ಉಸ್ತಾದ್ ಉದ್ಘಾಟಿಸಿದರು.
ನಂತರ ಜಿಲ್ಲೆಯ ವಿವಿಧ ಕಡೆಗಳಿಂದ ಬಂದ ನಾಯಕರಿಗೆ ಎಸ್.ವೈ.ಎಸ್ ಕೇರಳ ರಾಜ್ಯ ಕಾರ್ಯದರ್ಶಿ ಅಬ್ದುಲ್ ಕಲಾಂ ಮಾಸ್ಟರ್ ತರಗತಿ ನಡೆಸಿದರು. ಈಗಿನ ಕಾಲದಲ್ಲಿ ಸಾಂಘಿಕ ಕಾರ್ಯಾಚರಣೆಯ ಕುರಿತು ಆಳವಾಗಿ ವಿವರಿಸಿದರು.
ಎಸ್ ಎಸ್ ಎಫ್ ಜಿಲ್ಲಾದ್ಯಕ್ಷ ಝುಬೈರ್ ಸಅದಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಮುಜೀಬ್, ರಾಜ್ಯ ಸಮಿತಿ ಸದಸ್ಯರಾದ ಇಬ್ರಾಹಿಂ ಮಾಸ್ಟರ್ ಜಿಲ್ಲಾ ಕೋಶಾಧಿಕಾರಿ ಸಯ್ಯದ್ ಶಿಹಾಬ್ ತಂಙಳ್, ರಫೀಕ್ ಲತೀಫಿ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ನೆಲ್ಯಹುದಿಕೇರಿ ಸ್ವಾಗತಿಸಿದರು. ಕಾರ್ಯದರ್ಶಿ ಶಾಫಿ ಕುಂಜಿಲ ವಂದಿಸಿದರು.
ವರದಿ : ನೌಫಲ್