ಮಡಿಕೇರಿ ಜೂ.5 NEWS DESK : ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಸಿದ್ದರಾಜು ಬೆಳ್ಳಯ್ಯ ಅವರು ಪರಿಸರ ದಿನಾಚರಣೆ ಮಹತ್ವ ಕುರಿತು ಮಾತನಾಡಿ, ಇಡೀ ವಿಶ್ವಕ್ಕೆ ಇರುವುದು ಒಂದೇ ಭೂಮಿ, ಆದರೆ ಭೂಮಿಯ ಮೇಲೆ ವಾಸಿಸುವ ಸುಮಾರು 700 ಕೋಟಿ ಜನಸಂಖ್ಯೆಗೆ ವಾಸಿಸುತ್ತಿದ್ದು, ಈ ಭೂಮಿಯನ್ನು ರಕ್ಷಿಸ ಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಮನುಕುಲಕ್ಕೆ ಸಂಸ್ಕಾರ ಪ್ರಾರಂಭವಾಗುವುದು ಮನೆಯಿಂದಲೇ ಈ ಸಂಸ್ಕಾರದಲ್ಲಿ ಪರಿಸರ ಸಂರಕ್ಷಣೆ ಒಂದಾಗಿದ್ದು, ನಾವು ಪರಿಸರವನ್ನು ಸಂರಕ್ಷಿಸಿದರೆ ಪರಿಸರವು ನಮ್ಮನ್ನು ಸಂರಕ್ಷಿಸುತ್ತದೆ. ನೆಲ ಜಲ ಮತ್ತು ಭೂಮಿಯು ಮನುಕುಲಕ್ಕೆ ಎಲ್ಲವನ್ನು ಪರಿಶುದ್ಧವಾದದ್ದನ್ನೇ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾದ ವಾಣಿ, ರಾಜ್ಯಶಾಸ್ತ್ರ ಉಪನ್ಯಾಸಕರಾದ ಯೋಗಿತ, ಇತಿಹಾಸ ಉಪನ್ಯಾಸಕ ಪರಶುರಾಮಪ್ಪ, ಕನ್ನಡ ಉಪನ್ಯಾಸಕ ಶ್ರೀನಿವಾಸ್ ಮತ್ತು ಧರ್ಮಸ್ಥಳ ಸ್ವಸಹಾಯ ಸಂಘದ ಕ್ಷೇತ್ರ ಸಹಾಯಕರಾದ ಸಬೀನಾ ಮತ್ತು ಸಂತೋಷ್ ಹಾಜರಿದ್ದರು.