ವಿರಾಜಪೇಟೆ ಜೂ.5 NEWS DESK : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿರಾಜಪೇಟೆ ವಿಭಾಗದ ವಿರಾಜಪೇಟೆ ಪ್ರಾದೇಶಿಕ ಅರಣ್ಯ ವಲಯದ ವತಿಯಿಂದ ವಿರಾಜಪೇಟೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯಿಂದ ಶಾಲಾ ಆವರಣದಲ್ಲಿ ವಿವಿಧ ಗಿಡಗಳನ್ನು ನೆಡಲಾಯಿತು.
ಬಳಿಕ ವಿದ್ಯಾರ್ಥಿಗಳಿಗೆ ಪರಿಸರ ದಿನಾಚರಣೆ ಹಾಗೂ ಗಿಡಗಳನ್ನು ನೆಡುವುದರ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು. ಪರಿಸರ ಸಂರಕ್ಷಣೆ ಮಾಡುವುದರ ಕುರಿತು ಮಾಹಿತಿ ನೀಡಲಾಯಿತು.
ಈ ಸಂದರ್ಭ ವಿರಾಜಪೇಟೆ ಡಿ.ಸಿ.ಎಫ್. ಜಗನಾಥ್ ಎನ್.ಎಚ್, ಎಸಿಎಫ್ ನೆಹರು ಕೆ.ಎ, ಪ್ರೊಬೇಷನರಿ ಎಸಿಎಫ್ ಕುಮಾರಿ ಮಹಾಲಕ್ಷ್ಮಿ, ಆರ್.ಎಫ್.ಓ ಕೆ.ಎಂ.ದೇವಯ್ಯ, ಉಪ ವಲಯ ಅರಣ್ಯಾಧಿಕಾರಿ ಕೆ.ಆರ್.ಆನಂದ, ಎಂ.ಎಸ್.ಮೋನಿಷಾ, ಸಚಿನ್ ನಿಂಬಾಳ್ಕರ್, ಜನಾರ್ಧನ, ಡಿ.ಪಿ.ಸಂಜಿತ್, ಗಸ್ತು ಅರಣ್ಯಾ ಪಾಲಕರಾದ ಚಂದ್ರಶೇಕರ ಅಮರಗೋಳ, ವಿರಾಜಪೇಟೆ ಅರಣ್ಯ ಇಲಾಖೆ ಸಿಬ್ಬಂದಿಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರಾದ ಷಡಕ್ಷರಿ ಹಾಗೂ ಶಿಕ್ಷಕರುಗಳು, ಎಲ್ಲಾ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಇದ್ದರು.