ಮೈಸೂರು ಜೂ.6 NEWS DESK : ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ನ ಎಸ್.ಎಲ್.ಭೋಜೇಗೌಡ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕುಮಾರ್ ಸೋಲು ಅನುಭವಿಸಿದ್ದಾರೆ.
ಭೋಜೇಗೌಡರು 9829 ಮತಗಳನ್ನು ಗಳಿಸಿ 5267 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಕೆ.ಕೆ.ಮಂಜುನಾಥ್ ಕುಮಾರ್ 4562 ಮತಗಳನ್ನಷ್ಟೇ ಪಡೆದರು.
ಒಟ್ಟು 19479 ಮತಗಳು ಚಲಾವಣೆಗೊಂಡಿದ್ದು, 821 ಮತಗಳು ಅಸಿಂಧು ಆಗಿವೆ. ಬಿಜೆಪಿ, ಜೆಡಿಎಸ್ ಮೈತ್ರಿ ಕೂಟದ ಭೋಜೇಗೌಡರ ಗೆಲುವಿನಿಂದ ಕಾಂಗ್ರೆಸ್ ಗೆ ಆಘಾತವಾಗಿದೆ. ಜೆಡಿಎಸ್ ಕಾರ್ಯಕರ್ತರು ಜಯಘೋಷದೊಂದಿಗೆ ಸಂಭ್ರಮಿಸಿದರು.









