ಮಡಿಕೇರಿ ಜೂ.8 NEWS DESK : ದೇಶದ ಹೆಮ್ಮೆಯ ಸಮರ್ಥ ನಾಯಕ ನರೇಂದ್ರ ಮೋದಿ ಅವರು ಜೂ.9 ರಂದು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರವಹಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಿದ್ದಾಪುರ ಅಯ್ಯಪ್ಪ ದೇವಾಲಯದಲ್ಲಿ ಮತ್ತು ಶ್ರೀ ರಾಮಮಂದಿರದಲ್ಲಿ ವಿಶೇಷ ಪೂಜೆ ನಡೆಯಲಿದೆ.
ಕೇಸರಿ ಯೂತ್ ಮೂವ್ ಮೆಂಟ್ ನೇತೃತ್ವದಲ್ಲಿ ಸಿದ್ಧಾಪುರದ ಶ್ರೀ ನರೇಂದ್ರಮೋದಿ ಅಭಿಮಾನಿ ಬಳಗ ಮತ್ತು ಮಹಾರಾಜ ಯದುವೀರ್ ಯುವ ಬ್ರಿಗೇಡ್ ವತಿಯಿಂದ ಪ್ರಧಾನಿಯವರ ಆರೋಗ್ಯ, ದೇಶದ ಅಭಿವೃದ್ಧಿಗೆ ಕೈಗೊಳ್ಳುವ ಕೆಲಸಕಾರ್ಯಗಳಿಗೆ, ದೇವರ ಅನುಗ್ರಹ ಇರಲಿ ಎಂದು ಪ್ರಾರ್ಥನೆಯೊಂದಿಗೆ ಸಂಜೆ 5.30 ಕ್ಕೆ ಸಿದ್ಧಾಪುರ ಅಯ್ಯಪ್ಪ ದೇವಾಲಯ ಮತ್ತು 6.30 ಕ್ಕೆ ಸಿದ್ಧಾಪುರ ಶ್ರೀರಾಮಮಂದಿರದಲ್ಲಿ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿದ್ದು, ನಂತರ ಸಿದ್ಧಾಪುರ ನಗರದಲ್ಲಿ ಪಟಾಕಿ ಸಿಡಿಸಿ ಬೃಹತ್ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಅಭಿಮಾನಿ ಬಳಗ ತಿಳಿಸಿದೆ.