ಮಡಿಕೇರಿ ಜೂ.8 NEWS DESK : ದಕ್ಷಿಣ ಭಾರತದ ಆರು ರಾಜ್ಯಗಳನ್ನು ಒಳಗೊಂಡಂತೆ, ‘ಪ್ರವಾಸೋದ್ಯಮ’ವನ್ನು ಕೇಂದ್ರವಾಗಿರಿಸಿಕೊಂಡ ವಿವಿಧ ಉದ್ಯಮಗಳಲ್ಲಿ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವ ಪ್ರಮುಖ ಚಿಂತನೆಯಡಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೂ.15 ಮತ್ತು 16 ರಂದು ‘ದಕ್ಷಿಣ ಭಾರತ ಉತ್ಸವ’ ನಡೆಯಲಿದೆಯೆಂದು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಬಿ.ಆರ್. ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಫೆಡರೇಷನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್(ಎಫ್‍ಕೆಸಿಸಿಐ), ಪ್ರವಾಸೋದ್ಯಮ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಕೇರಳ ಪುದುಚೇರಿ, ತಮಿಳುನಾಡು ಮತ್ತು ಲಕ್ಷ ದ್ವೀಪಗಳಿಗೆ ಸಂಬಂಧಿಸಿದಂತೆ ದಕ್ಷಿಣ ಭಾರತ ಉತ್ಸವವನ್ನು ಆಯೋಜಿಸಲಾಗಿದೆ. ಈ ಉತ್ಸವದ ಮೂಲಕ ಕರ್ನಾಟಕಕ್ಕೆ ಸೀಮಿತವಾಗಿ 1 ಸಾವಿರ ಕೋಟಿ ಬಂಡವಾಳ ಹೂಡಿಕೆಯನ್ನು ನಿರೀಕ್ಷಿಸಲಾಗಿದೆಯೆಂದು ಮಾಹಿತಿಯನ್ನಿತ್ತರು.
ದಕ್ಷಿಣ ಭಾರತ ಉತ್ಸವಕ್ಕೆ ಆರಂಭಿಕ ದಿನದಂದು ಬೆಳಗ್ಗೆ 10.30 ಗಂಟೆಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದು, ಪ್ರವಾಸೋದ್ಯಮ ಇಲಾಖಾ ಸಚಿವರಾದ ಹೆಚ್.ಕೆ.ಪಾಟೀಲ್ ಮತ್ತು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಉತ್ಸವ ಪ್ರವಾಸೋದ್ಯಮ ಕೇಂದ್ರಿತವಾಗಿದ್ದರು, ದಕ್ಷಿಣ ಭಾರತದ ರಾಜ್ಯಗಳಲ್ಲಿ ವಿವಿಧ ಉದ್ದಿಮೆಗಳ ಆರಂಭಕ್ಕೆ ಉತ್ಸಾಹ ತೋರುವ ಹೂಡಿಕೆದಾರರಿಗೂ ಅವಕಾಶವನ್ನು ಕಲ್ಪಿಸಲಾಗಿದೆಯೆಂದು ತಿಳಿಸಿದರು.
ಏಕ ಗವಾಕ್ಷಿ ಸೌಲಭ್ಯ : ದಕ್ಷಿಣ ಭಾರತ ಉತ್ಸವದಲ್ಲಿ ಪಾಲ್ಗೊಳ್ಳುವ ಹೂಡಿಕೆದಾರರಿಗೆ, ಅವರ ಉದ್ಯಮಗಳ ಆರಂಭಕ್ಕೆ ಅಗತ್ಯವಾದ ಸರ್ಕಾರಿ ಜಾಗವನ್ನು ಗುತ್ತಿಗೆ ಆಧಾರದಲ್ಲಿ ಒದಗಿಸುವುದು, ಅಗತ್ಯ ಸೌಲಭ್ಯಗಳ ಪೂರೈಕೆ ಮೊದಲಾದವುಗಳಿಗೆ ಏಕ ಗವಾಕ್ಷಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆಂದು ನಾಗೇಂದ್ರ ಪ್ರಸಾದ್ ತಿಳಿಸಿದರು.
ದಕ್ಷಿಣ ಭಾರತ ಉತ್ಸವದ ಮೂಲಕ ಪ್ರವಾಸೋದ್ಯಮದ ವಿವಿಧ ವಿಭಾಗಗಳಲ್ಲಿ ಆಸಕ್ತಿ ಹೊಂದಿರುವ, 2 ರಿಂದ 5 ಕೊಟಿ ರೂ.ಗಳನ್ನು ಹೂಡಿಕೆ ಮಾಡಲು ಆಸಕ್ತರಾಗಿರುವ ಹೂಡಿಕೆದಾರರನ್ನು ಗುರುತಿಸಿ, ಅವರಿಗೆ ಅಗತ್ಯ ನೆರವನ್ನು ಒದಗಿಸುವುದು ಉತ್ಸವದ ಉದ್ದೇಶವಾಗಿದೆ. ಉತ್ಸವದಲ್ಲಿ ವಿವಿಧ ವಿಷಯಗಳ ವಿಚಾರ ಸಂಕಿರಣ, ಮಳಿಗೆಗಳು ಇರಲಿದೆಯೆಂದು ಮಾಹಿತಿಯನನ್ನಿತ್ತರು.
ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಉತ್ತೇಜನ :: ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಲ್ಲಿ ಧೈರ್ಯ ತುಂಬುವ, ಅವರ ಉದ್ಯಮಕ್ಕೆ ಅಗತ್ಯ ನೆರವನ್ನು ಒದಗಿಸುವ ಉದ್ದೇಶ ದಕ್ಷಿಣ ಭಾರತ ಉತ್ಸವದ್ದಾಗಿದೆ. ಇದರಲ್ಲಿ ಪಾಲ್ಗೊಳ್ಳುವ ಹೂಡಿಕೆದಾದರು ತಮಗಿಷ್ಟ ಬಂದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಉತ್ಸವದಲ್ಲಿ ಪಾಲ್ಗೊಳ್ಳುವವರಿಗೆ ತಲಾ 2500 ರೂ. ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ. ಹೀಗಿದ್ದೂ ಕೊಡಗಿನ ಹೂಡಿಕೆದಾರರಿಗೆ ಉತ್ಸವದಲ್ಲಿ ಪ್ರವೇಶ ಶುಲ್ಕವಿಲ್ಲದೆ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆಯೆಂದು ತಿಳಿಸಿದರು.
ರಸ್ತೆ ತೆರಿಗೆಯ ಮಾರ್ಪಾಡು :: ದಕ್ಷಿಣ ಭಾರತ ಉತ್ಸವದಲ್ಲಿ ಪ್ರಮುಖವಾಗಿ, ದಕ್ಷಿಣ ಭಾರತದ ರಾಜ್ಯಗಳಿಗೆ ಭೇಟಿ ನಿಡುವ ಪ್ರವಾಸಿಗರ ಅನುಕೂಲಕ್ಕೆ ಪೂರಕವಾಗಿ ಒಮ್ಮೆ ಒಂದು ವಾಹನಕ್ಕೆ ರಸ್ತೆ ತೆರಿಗೆ ವಿಧಿಸಿದಲ್ಲಿ, ಆ ವಾಹನಕ್ಕೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿ ಸಂಚರಿಸಲು ಅವಕಾಶ ನೀಡಬೇಕೆನ್ನುವ ವಿಚಾರ ಚರ್ಚೆಗೆ ಒಳಪಡಲಿದೆ. ಇದರೊಂದಿಗೆ ಮೈಸೂರು ದಸರಾ ಸಂದರ್ಭ ಮೈಸೂರು ವಿಭಾಗದಲ್ಲಿ ರಸ್ತೆ ತೆರಿಗೆಗೆ ವಿನಾಯಿತಿ ನೀಡುವ ರೀತಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿನ ವಿಶೇಷ ಸಂದರ್ಭಗಳಲ್ಲಿ ಇಂತಹ ಅವಕಾಶ ಕಲ್ಪಿಸುವ ಬಗೆಗಿನ ಸಾಧ್ಯಾಸಾಧ್ಯತೆಗಳ ಬಗ್ಗೆ ದಕ್ಷಿಣ ಭಾರತ ಉತ್ಸವದಲ್ಲಿ ಚರ್ಚೆಗಳು ನಡೆಯಲಿದೆಯೆಂದು ವಿವರಿಸಿದರು.
ಕಾಫಿ ಉತ್ಪನ್ನಗಳ ಉತ್ತೇಜನಕ್ಕೆ ಒತ್ತು :: ಎಫ್‍ಕೆಸಿಸಿಐ ನಿರ್ದೇಶಕ ಗರೀಶ್ ಗಣಪತಿ ಮಾತನಾಡಿ, ದಕ್ಷಿಣ ಭಾರತ ಉತ್ಸವದಲ್ಲಿ ಕೊಡಗಿನ ಕಾಫಿಯ ವಿವಿಧ ಉತ್ಪನ್ನಗಳ ಉತ್ಮಿಗಳಿಗೆ, ಅವರ ಉತ್ಪನ್ನಗಳ ಉತ್ತೇಜನಕ್ಕೆ ಅವಕಾಶವನ್ನು ಒದಗಿಸಲಾಗುತ್ತದೆಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷರಾದ ನವೀನ್ ಅಂಬೆಕಲ್, ಚೇಂಬರ್‍ನ ಪೂರ್ವಾಧ್ಯಕ್ಷರಾದ ಬಿ.ಎಂ. ಪ್ರಕಾಶ್, ಕಾರ್ಯಾಧ್ಯಕ್ಷರಾದ ಮೊಂತಿ ಗಣೇಶ್, ಜಾಹೀರ್ ಅಹಮ್ಮದ್ ಉಪಸ್ಥಿತರಿದ್ದರು.
Breaking News
- *ಜಿಲ್ಲಾ ಮಟ್ಟದ ಚಾಂಪಿಯನ್ಶಿಪ್ನಲ್ಲಿ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ*
- *ವೀರ ಸೇನಾನಿಗಳಿಗೆ ಅಗೌರವ : ನಿವೃತ್ತ(ಮಾಜಿ) ಯೋಧರ ಒಕ್ಕೂಟ ಅರೆ ಸೇನಾಪಡೆ ಖಂಡನೆ : ಆರೋಪಿಯ ಗಡಿಪಾರಿಗೆ ಆಗ್ರಹ*
- *ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಚುನಾವಣೆ ಫಲಿತಾಂಶ*
- *ನ.29ರಂದು ಕೊಡಗು ಜಿಲ್ಲಾ ನಿವೃತ್ತ(ಮಾಜಿ) ಯೋಧರ ಒಕ್ಕೂಟ ಅರೆ ಸೇನಾಪಡೆಯ 12ನೇ ವಾರ್ಷಿಕ ಮಹಾಸಭೆ*
- *ನ.30 ರಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜನಪದ ನೃತ್ಯ ಮತ್ತು ಟಿ.ಪಿ.ರಮೇಶ್ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ*
- *ಇಂಡಿಯನ್ ಫಿಲ್ಟರ್ ಕಾಫಿ ಚಾಂಪಿಯನ್ಶಿಪ್ : ಶಶಾಂಕ್ ರಾಜ್ಯಮಟ್ಟಕ್ಕೆ ಆಯ್ಕೆ*
- *ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ರಸ ಪ್ರಶ್ನೆ ಸ್ಪರ್ಧೆ ಮತ್ತು ಗೀತ ಗಾಯನ ಕಾರ್ಯಕ್ರಮ : ಮಕ್ಕಳಲ್ಲಿ ಕನ್ನಡ ಪ್ರೀತಿಯನ್ನು ಬೆಳೆಸಿ : ಎಂ.ಪಿ.ಕೇಶವ ಕಾಮತ್*
- *ನ.26ರಂದು ಸಿಎನ್ಸಿಯಿಂದ ಮಡಿಕೇರಿ ಸಮೀಪ ಕ್ಯಾಪಿಟಲ್ ವಿಲೇಜ್ ನಲ್ಲಿ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ಶಿಶು ಸಾಹಿತ್ಯದ ಪಿತಾಮಹ ಪಂಜೆ ಮಂಗೇಶರಾಯರು*
- *ಸುಂಟಿಕೊಪ್ಪದಲ್ಲಿ ಹಳೆ ವಿದ್ಯಾರ್ಥಿಗಳ ಸ್ನೇಹಮಿಲನ ಕಾರ್ಯಕ್ರಮ : ಸಾಧಕರಿಗೆ ಸನ್ಮಾನ*