
ಮಡಿಕೇರಿ ಜೂ.11 NEWS DESK : ಸೋಮವಾರಪೇಟೆ ಹೋಂ ಸ್ಟೇ ಅಸೋಸಿಯೇಷನ್ ವತಿಯಿಂದ ಹೋಂಸ್ಟೇ ಸದಸ್ಯರುಗಳಿಗೆ ಕೈಗಾರಿಕ ಭೇಟಿ ನಡೆಯಿತು.
ಅಯಾತನ ರೆಸಾರ್ಟ್ ಗೆ ಭೇಟಿ ನೀಡಿದ ಸದಸ್ಯರು ರೆಸಾರ್ಟ್ ನ ಕಾರ್ಯ ನಿರ್ವಹಣೆ, ಆಡಳಿತ, ರೆಸಾರ್ಟ್ ನ ಸೌಲಭ್ಯಗಳು, ಕೊಟ್ಟಡಿಗಳ ನಿರ್ವಹಣೆ, ರೆಸಾರ್ಟ್ ನ ರೆಸ್ಟೋರೆಂಟ್, ಸ್ಪಾ, ಬಗ್ಗೆ ಮಾಹಿತಿ ಪಡೆದುಕೊಂಡರು.
ನಂತರ ಹೋಂಸ್ಟೇ ಅಸೋಸಿಯೇಷನ್ ಸದಸ್ಯರುಗಳಿಗೆ ಐಇಂದ್ರ ಹೋಂ ಸ್ಟೇಯಲ್ಲಿ ಅಡುಗೆ ಸ್ಪರ್ಧೆ ನಡೆಯಿತು. ಸ್ಪರ್ಧೆಯ ತೀರ್ಪುಗಾರರಾಗಿ ಅಯಾತನ ರೆಸಾರ್ಟ್ ನ ಜನರಲ್ ಮ್ಯಾನೇಜರ್ ಎಂ.ಜಿಷ್ಣು , ಸೀನಿಯರ್ ಎಕ್ಸಿಕ್ಯೂಟಿವ್ ಷಪ್ ಜೂಲಿಯಸ್ ಬಿಸ್ವಾಸ್, ಮ್ಯಾನೇಜರ್ ಉನ್ನಿಕೃಷ್ಣನ್ ಕಾರ್ಯನಿರ್ವಹಿಸಿದರು.
ಅಡುಗೆ ಸ್ಪರ್ಧೆ ವಿಜೇತರಿಗೆ ಐಇಂದ್ರ ಹೋಂ ಸ್ಟೇ ಮಾಲೀಕರಾದ ಜಯಪ್ರಕಾಶ್ ಬಹುಮಾನ ವಿತರಿಸಿದರು.
ಈ ಸಂದರ್ಭ ಹೋಂಸ್ಟೇಷನ್ ಅಧ್ಯಕ್ಷ ಸಿ.ಕೆ.ರೋಹಿತ್, ಉಪಾಧ್ಯಕ್ಷ ಯೋಗೇಶ್ ಪಟೇಲ್, ಕಾರ್ಯದರ್ಶಿ ಅಭಿನಂದ್ ಹಾಗೂ ಖಜಾಂಚಿ ಪ್ರೀತಮ್ ಗೌಡ ಹಾಗೂ ಹೋಂ ಸ್ಟೇ ಅಸೋಸಿಯೇಷನ್ ನ ಎಲ್ಲಾ ಸದಸ್ಯಗಳು ಹಾಜರಿದ್ದರು.








