
ಸುಂಟಿಕೊಪ್ಪ ಜೂ.11 NEWS DESK : ಬೆಂಗಳೂರಿನ ಚಿಕ್ಕಬಳ್ಳಾಪುರದಲ್ಲಿ ನಡೆದ ದಕ್ಷಿಣ ಏಷ್ಯ ಸೆಸ್ಟೊಬಾಲ್ ಪಂದ್ಯಾವಳಿಯಲ್ಲಿ ಭಾರತ ತಂಡ ಚಿನ್ನಪದಕಗಳಿಸಿದೆ.
20 ರಿಂದ 24 ವಯೋಮಾನದ ವಿಭಾಗದ ಪಂದ್ಯಾವಳಿಯಲ್ಲಿ ಕೊಡಗಿನ ಸುಂಟಿಕೊಪ್ಪದ ಇರ್ಷಾದ್ ಮುಸ್ತಫಾ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.
ಫೈನಲ್ ಪಂದ್ಯಾವಳಿಯು ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ನಡೆದು ಶ್ರೀಲಂಕಾ ತಂಡವನ್ನು ಮಣಿಸುವ ಮೂಲಕ ಭಾರತದ ಮುಡಿಗೆ ಚಿನ್ನದ ಪದಕವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇರ್ಷಾದ್ ಮುಸ್ತಫಾ ಸುಂಟಿಕೊಪ್ಪ ನಿವಾಸಿ ದಿವಂಗತ ಜಾವಮನೆ ಮುಸ್ತಾಫ ಮತ್ತು ರಹಿಮತ್ ದಂಪತಿಗಳ ಪುತ್ರ.








