ಸುಂಟಿಕೊಪ್ಪ ಜೂ.13 NEWS DESK : ಬಿದ್ದು ಸಿಕ್ಕಿದ ಹಣವನ್ನು ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಆಶಾ ಕಾರ್ಯಕರ್ತೆ ಹಾಗೂ ಬೆಳೆಗಾರರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ಸುಂಟಿಕೊಪ್ಪದ ಗಿರಿಯಪ್ಪ ಮನೆ ನಿವಾಸಿ ಯಂಕನ ಕೌಶಿಕ್ ಎಂಬುವವರಿಗೆ ಸೇರಿದ ರೂ.500 ಮುಖಬೆಲೆಯ ಒಟ್ಟು ರೂ.16 ಸಾವಿರ ಕಳೆದು ಹೋಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ವೈರಲ್ ಆಗಿತ್ತು. ಸುಂಟಿಕೊಪ್ಪದ ವಿಎಸ್ಎಸ್ಎನ್ ಮುಂಭಾಗದಲ್ಲಿ ಆಶಾ ಕಾರ್ಯಕರ್ತೆ ವೀಣಾ ಹಾಗೂ ಬೆಳೆಗಾರ ಸತೀಶ್ ಎಂಬುವವರಿಗೆ ಹಣ ದೊರೆತ್ತಿತ್ತು. ಇವರಿಬ್ಬರು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ಹಣವನ್ನು ತಲುಪಿಸಿದರು.
ವಿಷಯ ತಿಳಿದ ಯಂಕನ ಕೌಶಿಕ್ ತಮ್ಮ ಹಣದ ಲೆಕ್ಕಾಚಾರ ಮತ್ತು ಸೂಕ್ತ ದಾಖಲೆಯನ್ನು ಠಾಣಾಧಿಕಾರಿ ಎಂ.ಸಿ.ಶ್ರೀಧರ್ ಅವರ ಮುಂದೆ ಹಾಜರುಪಡಿಸಿ ಹಣವನ್ನು ಮರಳಿ ಪಡೆದರು. ಪ್ರಮಾಣಿಕತೆ ಮೆರೆದು ಮಾದರಿಯಾದ ವೀಣಾ ಹಾಗೂ ಸತೀಶ್ ಅವರಿಗೆ ಕೌಶಿಕ್ ಕೃತಜ್ಞತೆ ಸಲ್ಲಿಸಿದರು.









