ಸುಂಟಿಕೊಪ್ಪ ಜೂ.14 NEWS DESK : ಸುಂಟಿಕೊಪ್ಪ ಪದವಿ ಪೂರ್ವ ಕಾಲೇಜಿನ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆಪ್ರಕ್ರಿಯೆಯು ಗುಪ್ತಮತದಾನದ ಮೂಲಕ ನಡೆಯಿತು.
ಮತದಾನ ಸಂಚಾಲಕರು ಹಾಗೂ ಮತದಾರ ಸಾಕ್ಷರತಾ ಅಧಿಕಾರಿ ಸರಳಾ ಮಾತನಾಡಿ, ದೇಶವನ್ನು ಕಟ್ಟುವ ತೀಕ್ಷ್ಣ ಆಯುಧವೇ ಮತದಾನ ಎಂದರು.
ಸಂವಿಧಾನವು ನಮಗೆ ಮತದಾನದಂತಹ ಪವಿತ್ರವಾದ ಹಕ್ಕುನ್ನು ನೀಡಿದೆ. ದೇಶಕಟ್ಟುವ ಕಾಯಕದಲ್ಲಿ ಪ್ರಜೆಗಳು ಭಾಗಿಯಾಗುವ ಅವಕಾಶವನ್ನು ಕಲ್ಪಿಸಿಕೊಟ್ಟಿರುವ ಬಗ್ಗೆ ವಿವರಿಸಿದರು.
ಕಾಲೇಜಿನಲ್ಲಿ ಅಸ್ತಿತ್ವದಲ್ಲಿರುವ ಮತದಾನ ಸಾಕ್ಷರತಾ ಸಂಘದ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ನೀಡಿದ ಅವರು, ನಾಳಿನ ಸುಂದರ ದೇಶವನ್ನು ಕಟ್ಟಲು ಇರುವ ತೀಕ್ಷ್ಣವಾದ ಆಯುಧವೇ ಮತದಾನ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಲತಾ, ಯುವ ಮತದಾರರು ಪ್ರಜಾಪ್ರಭುತ್ವದ ಭವಿಷ್ಯ. ದೇಶದ ಭವಿಷ್ಯಕ್ಕಾಗಿ ಉತ್ತಮ ನಾಯಕರನ್ನು ಆಯ್ಕೆ ಮಾಡಲು ಯುವಕರು ತಮ್ಮ ಮತದಾನದ ಶಕ್ತಿಯನ್ನು ಬುದ್ಧಿವಂತಿಕೆಯಿಂದ ಬಳಸಬೇಕೆಂದು ಕರೆ ನೀಡಿದ ಅವರು, ಈ ಉದ್ದೇಶದಿಂದ ಕಾಲೇಜಿನಲ್ಲಿ ಮಾದರಿ ಚುನಾವಣೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಗೌಪ್ಯ ಮತದಾನ ನಡೆಯಿತು. ಮತ ಎಣಿಕೆಯನ್ನು ಉಪನ್ಯಾಸಕರುಗಳಾದ ಸುನೀತಾ, ಅಭಿಷೇಕ್, ಪದ್ಮಾವತಿ, ಸುಚಿತ್ರಾ, ಆನುಷಾ, ಸಂಧ್ಯಾ, ಕವಿತಾಭಕ್ತಾ, ಈಶ ನೇರವೇರಿಸಿದರು.
ಮತದಾನದಲ್ಲಿ ಕಾಲೇಜು ನಾಯಕನಾಗಿ ಜೋಶ್ವರದಿ, ಉಪನಾಯಕಿಯಾಗಿ ರಿಶಾನ, ಕ್ರೀಡಾಮಂತ್ರಿಯಾಗಿ ಸಾಹುಲ್‍ಹಮಿತಿ, ಸಾಂಸ್ಕೃತಿಕ ಮಂತ್ರಿಯಾಗಿ ಫಾತಿಮತ್ ಸುಹೇರಾ, ಆರೋಗ್ಯಮಂತ್ರಿಯಾಗಿ , ಸ್ವಚ್ಚತಾ ಮಂತ್ರಿಯಾಗಿ ಸಮೀರಾ ಆಯ್ಕೆಯಾದರು.