ಮಡಿಕೇರಿ ಜೂ.14 NEWS DESK : ಪಾರಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆಯ ಮೂಲಕ ಶಾಲಾ ನಾಯಕರನ್ನು ನೇಮಕ ಆಯ್ಕೆಮಾಡಲಾಯಿತು.
ಶಾಲಾ ಮುಖ್ಯೋಪಾಧ್ಯಾಯರಾದ ವೇದಪ್ರಸಾದ್ ನಿರ್ದೇಶನದಂತೆ ನಡೆದ ಚುನಾವಣೆಯಲ್ಲಿ ಪ್ರಧಾನಮಂತ್ರಿಯಾಗಿ ಜೆ.ಸಿ.ಮನು, ಉಪ ಪ್ರಧಾನಿಯಾಗಿ ಹೆಚ್.ಪಿ.ಪೊನ್ನಪ್ಪ, ಗೃಹ ಮಂತ್ರಿಗಳಾಗಿ ಪ್ರೀತಂ ಮತ್ತು ತಶ್ವಿನ್ , ಆರೋಗ್ಯ ಮಂತ್ರಿಗಳಾಗಿ ರಚನ ಮತ್ತು ನವ್ಯ, ಕ್ರೀಡಾ ಮಂತ್ರಿಯಾಗಿ ಪೊನ್ನಪ್ಪ ಆಯ್ಕೆಯಾದರು.
ಸಾಂಸ್ಕೃತಿಕ ಸಚಿವರಾಗಿ ತಾನ್ಸಿ ಮತ್ತು ಸಿಂಧು, ಸ್ವಚ್ಚತಾ ಸಚಿವರಾಗಿ ನೇಹಾಲ್ ಮತ್ತು ಶಶಾಂಕ್, ತೋಟಗಾರಿಕೆ ಮಂತ್ರಿಗಳಾಗಿ ಡೆವಿನ್ ಕರುಂಬಯ್ಯ, ಮತ್ತು ಹೇಮಂತ್, ವಾರ್ತಾ ಮಂತ್ರಿಯಾಗಿ ನಂದಿನಿ, ಆಹಾರ ಮಂತ್ರಿಗಳಾಗಿ ಸಿಂಧು ಮತ್ತು ಪೂಜ ನೇಮಕಗೊಂಡರು.
ಪ್ರಜಾಪ್ರಭುತ್ವ ಮಾದರಿಯಲ್ಲಿ ಗುಪ್ತ ಮತದಾನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಿತು.
ನಂತರ ಮಾತನಾಡಿದ ಮುಖ್ಯ ಶಿಕ್ಷಕ ವೇದ ಪ್ರಸಾದ್, ಮಕ್ಕಳ ಮನಸ್ಸಿನಲ್ಲಿ ಪ್ರಜಾಪ್ರಭುತ್ವದ ಮಹತ್ವ ಮತ್ತು ದೇಶಕಟ್ಟುವಲ್ಲಿನ ಜವಾಬ್ದಾರಿಯ ಅರಿವನ್ನು ಈಗಿನಿಂದಲೇ ಜಾಗೃತಿಗೊಳಿಸಿದರೆ, ಮುಂದಿನ ಭವ್ಯ ಬಲಿಷ್ಠ ದೇಶದ ಕನಸು ನನಸಾಗಲಿದೆ ಮತ್ತು ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೆ ನಾಯಕತ್ವದೊಂದಿಗೆ ಸೇವಾ ಮನೋಭಾವ ರೂಢಿಸಿಕೊಳ್ಳಲು ಸಹಕಾರಿ ಆಗಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸಂಸತ್ ಚುನಾವಣೆಯು, ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಈ ಸಂದರ್ಭ ಸಹಶಿಕ್ಷಕ ಕಿಶೋರ್ ಕುಮಾರ್ ಸೇರಿದಂತೆ ಶಿಕ್ಷಕವೃಂದ ಹಾಜರಿದ್ದರು.