ಮಡಿಕೇರಿ ಜೂ.17 : ಪುತ್ತೂರಿನ ಕುಂಬ್ರ ಬಳಿ ಭಾನುವಾರ ನಡೆದ ಕಾರು ಮತ್ತು ಬೊಲೆರೊ ನಡುವಿನ ಅಪಘಾತದಲ್ಲಿ ಮೃತಪಟ್ಟ ವಾಲ್ನೂರು ತ್ಯಾಗತ್ತೂರುವಿನ ತ್ಯಾಗತ್ತೂರು ನಿವಾಸಿಗಳು, ಬಿಜೆಪಿಯ ಸಕ್ರಿಯ ಕಾರ್ಯಕರ್ತರೂ ಆದ ರವೀಂದ್ರ(53) ಹಾಗೂ ಲೋಕೇಶ್ (40) ಅವರ ಅಂತ್ಯ ಸಂಸ್ಕಾರ ಇಂದು ಸ್ವಗ್ರಾಮದಲ್ಲಿ ನಡೆಯಿತು.
ಮೃತ ರವೀಂದ್ರ ಪತ್ನಿ ಹಾಗೂ ಇಬ್ಬರು ಪುತ್ರರನ್ನು ಮತ್ತು ಲೋಕೇಶ್ ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಪುತ್ತೂರು ಬಿಜೆಪಿ ಪ್ರಮುಖ ಅರುಣ್ ಪುತ್ತಿಲ, ತ್ಯಾಗತ್ತೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಮನು ಮಹೇಶ, ಉಪಾಧ್ಯಕ್ಷ ಗಗನ್ ಉತ್ತಯ್ಯ, ಸಂಘ ಪರಿವಾರದ ಪ್ರಮುಖರಾದ ಪ್ರದೀಪ್, ರವೀಂದ್ರ ಭುವನೇಂದ್ರ ಮತ್ತಿತರರು ಮೃತ ದೇಹಗಳನ್ನು ತರುವಲ್ಲಿ ಸಂಪೂರ್ಣ ಸಹಕಾರ ನೀಡಿದರು.










