ಸಿದ್ದಾಪುರ ಜೂ.18 NEWS DESK : ವಿದ್ಯಾರ್ಥಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಅವಕಾಶ ಸಿಕ್ಕಾಗ ಬಳಸಿಕೊಂಡು ಸಾಧನೆ ಮಾಡಬೇಕು ಎಂದು ಸಿದ್ದಾಪುರ ಸಂತ ಜೋಸೆಫ್ ದೇವಾಲಯದ ಧರ್ಮಗುರು ಮೈಕಲ್ ಮರಿ ತಿಳಿಸಿದರು.
ಸಿದ್ದಾಪುರ ಎಸ್.ಜೆ.ಸಿ.ಕ್ರಿಕೆಟರ್ಸ್ ವತಿಯಿಂದ ಸಂತ ಜೋಸೆಫ್ ದೇವಾಲಯದಲ್ಲಿ ನಡೆದ ಧರ್ಮ ಕೇಂದ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಅಭಿನಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಈ ರೀತಿಯ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಪ್ರೇರೇಪಿಸಿದಂತಾಗುತ್ತದೆ ಎಂದರು.
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಹಾಗೂ ಕೊಡಗಿನಲ್ಲಿ ಪ್ರಥಮ ಸ್ಥಾನ ಪಡೆದ ನೆಲ್ಯಹುದಿಕೇರಿಯ ಜಾನ್ಸನ್ ಅವರ ಪುತ್ರಿ ಚರೀಷ್ಮ ಶೇ.85 ಅಂಕ ಪಡೆದ ಪಡೆದಿದ್ದಾಳೆ. ದ್ವಿತೀಯ ಪಿಯುಸಿ ನ ಜೀವಿನ್, ಜೋವಿಟ ಮತ್ತು ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚು ಅಂಕ ಪಡೆದ ಅನುಷ,ಶಿನೋಯ್,ದಿಯಾ ಜೋಸೆಫ್ ಅವರನ್ನು ಸನ್ಮಾನಿಸಿ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜೋಶ್ ಕುರಿಯನ್, ಜಿ.ಪಂ ಸದಸ್ಯ ಜಾನ್ಸನ್, ವಿಜೇಶ್, ಡಾನ್, ಜಾರ್ಜ್ ಜೋಸೆಫ್, ರೀಗಲ್, ಜೋಸಿ, ಜಿಮ್ಮಿ ಮಾಸ್ಟರ್, ಸಂತ ಅನ್ನಮ್ಮ ಶಾಲೆಯ ಸಿಸ್ಟರ್ಸ್, ಎಸ್.ಜೆ.ಸಿ. ಕ್ರಿಕೆಟರ್ಸ್ ತಂಡ ದ ಸನ್ನಿಲ್, ಅಂಟೋಣಿ, ಜೋಯ್, ಪೋಷಕರು ಹಾಜರಿದ್ದರು.