ಸೋಮವಾರಪೇಟೆ ಜೂ.18 NEWS DESK : ರೋಟರಿ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್‌ನ ಪದಗ್ರಹಣ ಕಾರ್ಯಕ್ರಮ ರೋಟರಿ ಭವನದಲ್ಲಿ ನಡೆಯಿತು.
2024-25ನೇ ಸಾಲಿನ ಅಧ್ಯಕ್ಷ ಜೆ.ಕೆ.ಪೊನ್ನಪ್ಪ ಹಾಗೂ ಕಾರ್ಯದರ್ಶಿ ಕೆ.ಡಿ.ಬಿದ್ದಪ್ಪ ಮತ್ತು ಆಡಳಿತ ಮಂಡಳಿ ಸದಸ್ಯರಿಗೆ ರೋಟರಿ ಚಾಮರಾಜನಗರ ಮಾಜಿ ಜಿಲ್ಲಾ ರಾಜ್ಯಪಾಲ ಡಾ. ಆರ್.ಎಸ್.ನಾಗಾರ್ಜುನ ಪದಗ್ರಹಣ ನೆರವೇರಿಸಿದರು.
ನಂತರ ಮಾತನಾಡಿ ಅವರು, ಕೆಲವೇ ಜನರಿಗೆ ತಲುಪುವ ಯೋಜನೆಗಿಂತ ಸಾವಿರಾರು ಜನರಿಗೆ ಸೇವೆ ನೀಡುವಂತಹ ಕೆಲಸ ಮಾಡಬೇಕೆಂದು ಹೇಳಿದರು. ರೋಟರಿ ಸಂಸ್ಥೆಗಳು ದೊಡ್ಡ ಕನಸ್ಸುಗಳನ್ನು ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಕರೆ ನೀಡಿದ ಅವರು ಚಾಮರಾಜನಗರದಲ್ಲಿ ರೋಟರಿ ಸಂಸ್ಥೆ ವತಿಯಿಂದ ಡಯಾಲೀಸಿಸ್ ಘಟಕ ಕಾರ್ಯನಿರ್ವಹಿಸುತ್ತಿದೆ. ಸೋಮವಾರಪೇಟೆ ರೋಟರಿ ಸಂಸ್ಥೆ ದೊಡ್ಡ ಕನಸ್ಸು ಕಾಣಲೇಬೇಕು. ಒಳ್ಳೆ ಕಾರ್ಯಕ್ಕೆ ದಾನಿಗಳು ಕೈಜೋಡಿಸಲಿದ್ದಾರೆ ಎಂದು ಹೇಳಿದರು.
ಪ್ರಪಂಚದಲ್ಲಿ 119 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ರೋಟರಿ ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಸಾಕಷ್ಟು ಅಂತಾರಾಷ್ಟ್ರೀಯ ಸಂಸ್ಥೆಗಳು ತಮ್ಮ ಯೋಜನೆಗಳಿಗೆ ರೋಟರಿ ಸೇವಾ ಸಂಸ್ಥೆಯ ಮಾದರಿಯನ್ನು ಅನುಸರಿಸುತ್ತಿರುವುದನ್ನು ಕಾಣಬಹುದು ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ರಾಜ್ಯಪಾಲಕರುಗಳಾದ ಎಂ.ಡಿ.ಲಿಖಿತ್, ಡಾ. ಹರಿ ಎ ಶೆಟ್ಟಿ, ವಲಯ ಸೇನಾನಿಗಳಾದ ಉಲ್ಲಾಸ್ ಕೃಷ್ಣ, ಎಂ.ಎಂ.ಪ್ರಕಾಶ್, ಮಾಜಿ ಅಧ್ಯಕ್ಷ ವಸಂತ ನಂಗಾರು, ಮಾಜಿ ಕಾರ್ಯದರ್ಶಿ ಚೇತನ್ ಚಂದ್ರಾಜು ಇದ್ದರು. ಮಡಿಕೇರಿ ರೋಟರಿ ಹಿಲ್ಸ್ ವತಿಯಿಂದ ರೋಟರಿ ಭವನಕ್ಕೆ ಪ್ರೊಜೆಕ್ಟರ್ ಮತ್ತು ಸ್ಕ್ರೀನ್ ನೀಡಿದರು.