ಕಡಂಗ ಜೂ.22 NEWS DESK : ಕೊಡಗು ಜಿಲ್ಲಾ ಸಖಾಫಿ ಕೌನ್ಸಿಲ್ ನ ಜಿಲ್ಲಾ ಮಟ್ಟದ ಸಂಗಮ ಹಾಗೂ ವಾರ್ಷಿಕ ಮಹಾಸಭೆ ಕೊಟ್ಟಮುಡಿ ಮರ್ಕಝುಲ್ ಹಿದಾಯ ಸಂಸ್ಥೆಯಲ್ಲಿ ನಡೆಯಿತು.
ಪ್ರಮುಖರಾದ ಅಬ್ಬಸ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.
ಈ ಸಂದರ್ಭ ಮಾತನಾಡಿದ ರಾಜ್ಯ ಸಮಿತಿ ನಾಯಕ ಮಹಮ್ಮದ್ ಅಲಿ ಸಖಾಫಿ ಅಶ್ ಅರಿಯ, ನಮ್ಮೆಲ್ಲರ ಆತ್ಮೀಯ ಗುರುಗಳಾದ ಶೈಖುನಾ ಸುಲ್ತಾನುಲ್ ಉಲಮಾ ಹಾಗೂ ಅವರ ಕಾರ್ಯಾಚರಣೆ, ಅವರೊಂದಿಗೆ ನಮಗಿರಬೇಕಾದ ಬಾಧ್ಯತೆ ಕುರಿತು ವಿವರಿಸಿದರು. ಜು.8ರಂದು ನಡೆಯುವ ಕರ್ನಾಟಕ ರಾಜ್ಯ ಸಖಾಫಿ ಬೃಹತ್ ಸಂಗಮ ಕಾರ್ಯಕ್ರಮದ ಯಶಸ್ವಿಗೆ ಕರೆ ನೀಡಿದರು.
ಉಸ್ತುವಾರಿಗಳಾಗಿ ರಾಜ್ಯ ಸಮಿತಿ ಸದಸ್ಯರಾದ ಮುಹಮ್ಮದ್ ಅಲಿ ಸಖಾಫಿ, ಅಝೀಝ್ ಸಖಾಫಿ ಪರಪ್ಪು ಹಾಗೂ ಸತ್ತಾರ್ ಸಖಾಫಿ ಬೆಳ್ಳಾರೆ ಪಾಲ್ಗೊಂಡಿದ್ದರು. ಪ್ರಧಾನ ಕಾರ್ಯದರ್ಶಿ ಅಝೀಝ್ ಸಖಾಫಿ ಕೊಡ್ಲಿಪೇಟೆ 2020-24ರ ವರೆಗಿನ ವರ್ಷದ ವರದಿ ಮಂಡಿಸಿದರು. ಪ್ರಾರ್ಥನೆಯ ನೇತೃತ್ವವನ್ನು ರಾಜ್ಯ ಸಖಾಫಿ ಕೊಶಾಧಿಕಾರಿ ಸಯ್ಯದ್ ಇಲ್ಯಾಸ್ ಸಖಾಫಿ ಐದರೂಸಿ ವಹಿಸಿದ್ದರು. ನೂತನ ಪ್ರಧಾನ ಕಾರ್ಯದರ್ಶಿ ರಾಫಿ ಸಖಾಫಿ ವಂದಿಸಿದರು.
ನಂತರ ಅಝೀಝ್ ಸಖಾಫಿ ಪರಪ್ಪು ಅವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಅಬ್ಬಾಸ್ ಸಖಾಫಿ ಪಡಿಯಾಣಿ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ರಾಫಿ ಕಾಮಿಲ್ ಸಖಾಫಿ ಅಯ್ಯಂಗೇರಿ, ಕೋಶಾಧಿಕಾರಿಯಾಗಿ ಅಬ್ದುಲ್ಲಾ ಸಖಾಫಿ ಕೊಟ್ಟಮುಡಿ ಹಾಗೂ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
ವರದಿ : ನೌಫಲ್ ಕಡಂಗ