ಮಡಿಕೇರಿ ಜೂ.22 NEWS DESK : ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಕೀರ್ತಿ ಭಾರತದ್ದು ಎಂದು ಕೊಳ್ಳೇಗಾಲ ಸಮೀಪದ ಕಾಮಗೆರೆಯ ಸಂತ ಫ್ರಾನ್ಸಿಸ್ ಕ್ಷೇವಿಯರ್ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಮತ್ತು ಧರ್ಮಗುರುಗಳಾದ ರೆ.ಫಾ.ಐಸಾಕ್ ರತ್ನಾಕರ್ ಅಭಿಪ್ರಾಯಪಟ್ಟರು.
ಶಾಲೆಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮತನಾಡಿ, ಭಾರತಕ್ಕೆ ಮಾತ್ರ ಸೀಮಿತವಾಗಿದ್ದ ಯೋಗವನ್ನು ಇಂದು ನಮ್ಮ ಪ್ರಧಾನಮಂತ್ರಿಗಳು ಇಡೀ ವಿಶ್ವಕ್ಕೆ ಪರಿಚಯಿಸಿದ್ದಾರೆ. ಆ ಮೂಲಕ ರಾಷ್ಟ್ರದ ಕೀರ್ತಿ ವಿಶ್ವಾಮಟ್ಟಕ್ಕೂ ಹಬ್ಬಿ, ಭಾರತವು ವಿಶ್ವಗುರುವಾಗಿದೆ ಎಂದ ಅವರು, ಯೋಗದ ಮಹತ್ವವನ್ನು ಮಕ್ಕಳಿಗೆ ಉದಾಹರಣೆ ಸಮೇತ ವಿವರಿಸಿದರು.
ಈ ಸಂದರ್ಭ ಶಾಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಂದ ಯೋಗಾಭ್ಯಾಸವು ನಡೆಯಿತು. ಮಕ್ಕಳು ಅತೀ ಉತ್ಸಾಹಯಿಂದ ಬೆಳಿಗ್ಗೆ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡರು. ಶಾಲಾ ಮುಖ್ಯೋಪಾಧ್ಯಾಯರಾದ ಅಂತೋಣಿ ರಾಜ್, ಸಹ ಶಿಕ್ಷಕರು, ಸಿಬ್ಬಂದಿಗಳು, ಪೋಷಕರು ಹಾಜರಿದ್ದರು.