ಮಡಿಕೇರಿ ಜೂ.22 NEWS DESK : ಯೋಗ ವ್ಯಕ್ತಿಯನ್ನು ಆರೋಗ್ಯವಂತ ಮತ್ತು ಸದೃಢ ವ್ಯಕ್ತಿಯನ್ನಾಗಿಸುತ್ತದೆ ಎಂದು ವಿರಾಜಪೇಟೆ ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕಾಡ್ಯಮಾಡ ಸುಬ್ಬಯ್ಯ ಹೇಳಿದರು.
ಬಾಳೆಲೆ ಪ್ರತಿಭಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನುಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿನಿತ್ಯವೂ ಯೋಗಾಭ್ಯಾಸವನ್ನು ಮಾಡುವುದು ನಮ್ಮ ಆರೋಗ್ಯದ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಯೋಗದ ಮಹತ್ವದ ಕುರಿತು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕರಾದ ಟಿ.ಸಿ.ಗೀತಾ ನಾಯ್ಡು ಮಾತನಾಡಿ, ಯೋಗವು ದೈನಂದಿನ ಉತ್ತಮ ಹವ್ಯಾಸಗಳಲ್ಲಿ ಒಂದು. ದಿನನಿತ್ಯದ ಯೋಗಭ್ಯಾಸ ನಮ್ಮ ದಿನವನ್ನು ಉತ್ಸಾಹ ಮತ್ತು ಲವಲವಿಕೆ ಇಂದ ಕೂಡಿರುವಂತೆ ಮಾಡುವುದು ದಿನವೂ ಯೋಗ ಮಾಡಿ ಉತ್ಸುಕರಾಗಿರುವುದು ಪ್ರತಿ ವ್ಯಕ್ತಿಗೂ ಅಗತ್ಯ ಎಂದು ನುಡಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕ ಮಾಚಂಗಡ ಅಯ್ಯಪ್ಪ, ಶಿಕ್ಷಕರುಗಳಾದ ಅಶ್ವಿನಿ ,ಯಶಸ್ವಿನಿ , ಸಾನಿಫಾ ಸೇರಿದಂತೆ ಇತರರು ಇದ್ದರು. ವಿದ್ಯಾರ್ಥಿಗಳು ವಿವಿಧ ಯೋಗಸನವನ್ನು ಮಾಡಿ ಗಮನ ಸೆಳದರು.