ಮಡಿಕೇರಿ ಜು.13 NEWS DESK : ವಿಶೇಷ ಘಟಕ ಯೋಜನೆ/ ಗಿರಿಜನ ಉಪಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳುವ ಅಭ್ಯರ್ಥಿಗಳಿಗೆ/ ಕೈಗಾರಿಕಾ ಘಟಕಗಳಿಗೆ ಶೇ.60 ರಷ್ಟು ಸಹಾಯಧನ, ಸಾಪ್ಟ್ ಸೀಡ್ ಕ್ಯಾಪಿಟಲ್ ಸವಲತ್ತು, ಬ್ಯಾಂಕುಗಳಿಂದ ಪಡೆದ ಸಾಲದ ಶುಲ್ಕ ಮರುಪಾವತಿಗಳನ್ನು ಮಂಜೂರು ಮಾಡಲಾಗುವುದು. ಶೇ. 60 ರಷ್ಟು ಸಹಾಯಧನ ಪಡೆಯಲು ಘಟಕದ ವೆಚ್ಚ ಗರಿಷ್ಟ 10 ಲಕ್ಷ ರೂ. ಆಗಿರಬೇಕು ಹಾಗೂ ನಿರ್ದಿಷ್ಟ ಚಟುವಟಿಕೆಯ ಘಟಕಗಳಿಗೆ ಮಾತ್ರ ಮಂಜೂರು ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಹಿನೂರು ರಸ್ತೆ, ಮಡಿಕೇರಿ ರವರನ್ನು ಸಂಪರ್ಕಿಸಬಹುದು ಎಂದು ಕೊಡಗು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.