ಮಡಿಕೇರಿ ಜು.14 NEWS DESK : ಮಡಿಕೇರಿಯ ಸಕಾ೯ರಿ ಬಾಲಕರ ಬಾಲಮಂದಿರದ 27 ಮಕ್ಕಳಿಗೆ ರೋಟರಿ ವುಡ್ಸ್ ನಿಂದ ಬೆಚ್ಚನೆಯ ಜಕೀ೯ನ್ ವಿತರಿಸಲಾಯಿತು. ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ರೋಟರಿ ವುಡ್ಸ್ ನಿದೇ೯ಶಕ, ಬಾಲಸುಬ್ರಹ್ಮಣ್ಯ ಅವರು ಕೊಡುಗೆಯಾಗಿ ನೀಡಿದ ಜಕೀ೯ನ್ ಗಳನ್ನು ರೋಟರಿ ವುಡ್ಸ್ ಅಧ್ಯಕ್ಷ ಹರೀಶ್ ಕಿಗ್ಗಾಲು, ಕಾಯ೯ದಶಿ೯ ಕಿರಣ್ ಕುಂದರ್ ಸಮ್ಮುಖದಲ್ಲಿ ಕೇಂದ್ರದ ಆಪ್ತಸಮಾಲೋಚಕ ನಾಗಭೂಷಣ್ , ಕಛೇರಿ ಸಿಬ್ಬಂದಿ ಹೆಚ್, ಸೂರಜ್ ಅವರಿಗೆ ಹಸ್ತಾಂತರಸಲಾಯಿತು. ಈ ಸಂದಭ೯ ಮಾತನಾಡಿದ ಹರೀಶ್ ಕಿಗ್ಗಾಲು, ರೋಟರಿ ಸಂಸ್ಥೆಯು ಈ ವಷ೯ದಲ್ಲಿ ಅನೇಕ ವಿಭಿನ್ನ ಕಾಯ೯ಕ್ರಮಗಳನ್ನು ಆಯೋಜಿಸಲಿದೆ, ಮಳೆಗಾಲದಲ್ಲಿ ಹೆಚ್ಚುತ್ತಿರುವ ಛಳಿಯನ್ನು ಗಮನಿಸಿ ರೋಟರಿ ವುಡ್ಸ್ ಮೂಲಕ ಉದ್ಯಮಿ ಬಾಲಸುಬ್ರಹ್ಮಣ್ಯ ನೀಡಿದ ಜಕೀ೯ನ್ ಗಳನ್ನು ಮಕ್ಕಳಿಗೆ ನೀಡಿದ್ದೇವೆ ಶಾಲೆಗೆ ಮಳೆಯಲ್ಲಿ ತೆರಳುವ ಸಂದಭ೯ ಈ ಬೆಚ್ಚನೆಯ ಧಿರಿಸು ಮಕ್ಕಳನ್ನು ಬೆಚ್ಚಗಿಡಲು ನೆರವಾಗಲಿದೆ ಎಂದರು. ರೋಟರಿ ವುಡ್ಸ್ ನ ಕೊಡುಗೆಯನ್ನು ನಾಗಭೂಷಣ್ ಶ್ಲಾಘಿಸಿದರು, ರೋಟರಿ ವುಡ್ಸ್ ನಿದೇ೯ಶಕರಾದ ಧನಂಜಯ ಶಾಸ್ತ್ರೀ, ಅಜ್ಜೇಟಿರ ಲೋಕೇಶ್, ರವಿಕುಮಾರ್, ರವಿ.ಪಿ. ಜಹೀರ್ ಅಹ್ಮದ್, ಭಗತ್ ರಾಜ್, ರವಿಕುಮಾರ್, ಕಶ್ಯಪ್, ರೋಟರಿ ಮಿಸ್ಟಿ ಹಿಲ್ಸ್ ನಿದೇ೯ಶಕ ಅನಿಲ್ ಹೆಚ್, ಟಿ, ಸೇರಿದಂತೆ ರೋಟರಿ ಪ್ರಮುಖರಿದ್ದರು, ರೋಟರಿ ವುಡ್ಸ್ ವತಿಯಿಂದ ಮಕ್ಕಳಿಗೆ ಭೋಜನ ನೀಡಲಾಯಿತು. ಹಾಗೆಯೇ ರವಿ.ಪಿ.ಹಾಗು ರವಿಕುಯಮಾರ್ ಹಾಡುಗಳನ್ನು ಹಾಡಿ ಮಕ್ಕಳನ್ನು ರಂಜಿಸಿದರು.
::: ಗಮನ ಸೆಳೆದ ಜಾದು ಪ್ರದಶ೯ನ :::
ರೋಟರಿ ವುಡ್ಸ್ ನಿದೇ೯ಶಕರಾದ ಹೆಸರಾಂತ ಜಾದೂಗಾರ ವಿಕ್ರಂಶೆಟ್ಟಿ ಕೇಂದ್ರದಲ್ಲಿ ವಿಭಿನ್ನ ರೀತಿಯ ಜಾದೂ ಮೂಲಕ ಮಕ್ಕಳ ಸಂಭ್ರಮಕ್ಕೆ ಕಾರಣರಾದರು, ಡೆಂಘಿ ಬಾರದಂತೆ ಸೊಳ್ಳೆಗಳನ್ನು ಹೇಗೆಲ್ಲಾ ಕೈ ಚಪ್ರಾಳೆ ಮೂಲಕ ಹೊಡೆಯಬಹುದು, ಹಗ್ಗದ ಜಾದೂ, ರಿಬ್ಬನ್ ಜಾದೂ ಸೇರಿದಂತೆ 15 ಮ್ಯಾಜಿಕ್ ಗಳನ್ನು ವಿಕ್ರಂಶೆಟ್ಟಿ ಪ್ರದಶಿ೯ಸಿದರು, ಇದೇ ಸಂದಭ೯ ಮಕ್ಕಳಿಗೆ ಸರಳ ಜಾದೂ ವಿಧಾನಗಳನ್ನು ವಿಕ್ರಂ ಪ್ರಾಯೋಗಿಕವಾಗಿ ಕಲಿಸಿ ಕೊಟ್ಟು ಮಕ್ಕಳ ಸಂತಸಕ್ಕೆ ಕಾರಣರಾದರು.