
ಮಡಿಕೇರಿ ಜು.14 NEWS DESK : ಕಳೆದ 37 ವರ್ಷಗಳಿಂದ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಹಿಂದು ಜಾಗರಣ ವೇದಿಕೆಯ ಕೊಡಗು ಜಿಲ್ಲಾ ಸಂಯೋಜಕರಾಗಿ ಕುಕ್ಕೇರ ಅಜಿತ್ ಪುನರಾಯ್ಕೆಯಾಗಿದ್ದಾರೆ. ಕುಶಾಲನಗರದಲ್ಲಿ ಇಂದು ರಾಜ್ಯ ಪ್ರಮುಖರ ನೇತೃತ್ವದಲ್ಲಿ ನಡೆದ ಬೈಠಕ್ ನಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಜಿಲ್ಲಾ ಸಹ ಸಂಯೋಜಕರಾಗಿ ಸೋಮವಾರಪೇಟೆಯ ಬೋಜೆಗೌಡ, ಪೊನ್ನಂಪೇಟೆಯ ಶರತ್ , ಮಡಿಕೇರಿ ಶಾಂತಿನಿಕೇತನ ಚೇತನ್, ಬಿಟ್ಟಂಗಾಲದ ಯೋಗೇಶ್ ಆಯ್ಕೆಯಾಗಿದ್ದಾರೆ. ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಕಪಿಲ್ ಮಡಿಕೇರಿ, ಕುಮಾರ್ ಮೇಕೇರಿ, ಶಾಂತೆಯಂಡ ತಿಮ್ಮಯ್ಯ, ಹರೀಶ್ ಕುಶಾಲನಗರ, ಸುನೀಲ್ ಮಾದಾಪುರ, ವಿನಯ್ ಮಡಿಕೇರಿ, ರಾಜೀವ್ ಕುಶಾಲನಗರ, ಭವನ್ ಮೇಕೇರಿ ನೇಮಕಗೊಂಡಿದ್ದಾರೆ. ಮಡಿಕೇರಿ ತಾಲ್ಲೂಕು ಸಂಯೋಜಕರಾಗಿ ದುರ್ಗೇಶ್ , ವೀರಾಜಪೇಟೆ ತಾಲ್ಲೂಕು ಸಂಯೋಜಕರಾಗಿ ರವೀಂದ್ರ, ಪೊನ್ನಂಪೇಟೆ ತಾಲ್ಲೂಕು ಸಂಯೋಜಕರಾಗಿ ಸುಳ್ಳಿಮಾಡ ಸಂಪತ್ , ಕುಶಾಲನಗರ ತಾಲ್ಲೂಕು ಸಂಯೋಜಕರಾಗಿ ದಿನೇಶ್ ಅವರುಗಳನ್ನು ನೇಮಕ ಮಾಡಲಾಗಿದೆ. ಇದರೊಂದಿಗೆ ಜಿಲ್ಲಾ ಸಮಿತಿ ಹಾಗೂ ಜಿಲ್ಲೆಯ 5 ತಾಲ್ಲೂಕುಗಳಿಗೆ 80 ಕ್ಕೂ ಹೆಚ್ಚು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.










