ಸುಂಟಿಕೊಪ್ಪ ಜು.14 NEWS DESK : ಸುಂಟಿಕೊಪ್ಪ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ವೀರಾ ಡಿಸೋಜ ವರ್ಗಾವಣೆಗೊಂಡಿದ್ದು, ಅವರಿಗೆ ಸಂತ ಅಂತೋಣಿ ದೇವಾಲಯದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಸಂತ ಅಂತೋಣಿಯವರ ದೇವಾಲಯದ ಧರ್ಮಗುರುಗಳಾದ ವಿಜಯಕುಮಾರ್ ಹಾಗೂ ಪಾಲನಾ ಸಮಿತಿಯವರು ಶುಭ ಹಾರೈಸಿದರು. ವೀರಾ ಡಿಸೋಜ ಅವರು ಇದೀಗ ಶಿವಮೊಗ್ಗ ಜಿಲ್ಲೆಯ ಸಾಗರ ಜೋಗಾಕ್ಕೆ ವರ್ಗಾವಣೆಗೊಂಡಿದ್ದಾರೆ. ಈ ಸಂದರ್ಭ ದೇವಾಲಯ ಪಾಲನಾ ಸಮಿತಿ ಕಾರ್ಯದರ್ಶಿ ಸ್ವೆಲ್ವರಾಜ್, ಗ್ಯಾಬ್ರಿಯಲ್ ಡಿಸೋಜ, ರೋಸ್‌ಮೇರಿ ರಾಡ್ರಿಗಸ್, ಗ್ರೇಸಿ, ಕನ್ಯಾಸ್ತ್ರೀಯರು ಹಾಗೂ ಕ್ರೈಸ್ತ ಭಾಂದವರು ಇದ್ದರು.