ಮಡಿಕೇರಿ ಜು.14 NEWS DESK : ಕರುನಾಡು ಕಂಡ ಮೇರು ಸಾಹಿತಿ, ಪತ್ರಕರ್ತ, ಕುಲಪುರೋಹಿತ ಎಂಬ ಬಿರುದಿಗೆ ಭಾಜನರಾಗಿದ್ದ ಆಲೂರು ವೆಂಕಟರಾಯರ ಜನ್ಮ ದಿನಾಚರಣೆಯನ್ನು, ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶನದಂತೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಾರಾಣೆಯಲ್ಲಿ ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಗೆ, ರಾಯರ ಕುರಿತ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿ, ವಿಜೇತರಿಗೆ ಚಪ್ಪಾಳೆಗಳ ಮೂಲಕ ಅಭಿನಂದಿಸಿ, ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳನ್ನೂ ಪ್ರೋತ್ಸಾಹಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ವೇದಪ್ರಸಾದ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಶಿಕ್ಷಕ ಕಿಶೋರ್‌ಕುಮಾರ್ ಅವರು ವಿದ್ಯಾರ್ಥಿಗಳಿಗೆ ಆಲೂರು ವೆಂಕಟರಾಯರ ಭಾವಚಿತ್ರದೊಂದಿಗೆ, ರಾಯರ ಬದುಕು ಸಾಧನೆಯನ್ನು ವಿವರಿಸಿದರು. ಶಿಕ್ಷಕಿಯರಾದ ಸುಮಿತ್ರ, ಮಂಜುಳ ಅವರು ರಸಪ್ರಶ್ನೆ ಸ್ಪರ್ಧೆ ನಡೆಸಿದರು.