ಮಡಿಕೇರಿ ಜು.18 NEWS DESK : ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಿ.ವೈ.ರಾಜೇಶ್ ಅವರನ್ನು ಮೂಡ ಕಚೇರಿಯಲ್ಲಿ ಭೇಟಿಯಾದ ಕೆ.ನಿಡುಗಣೆ ಗ್ರಾ.ಪಂ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯ ಜಾನ್ಸನ್ ಪಿಂಟೋ ಅವರು ಅಭಿನಂದನೆ ಸಲ್ಲಿಸಿದರು. ನಂತರ ಅಭಿವೃದ್ಧಿ ಕಾರ್ಯಗಳ ಕುರಿತು ಸಮಾಲೋಚನೆ ನಡೆಸಿ, ಸನ್ಮಾನಿಸಿ ಶುಭ ಹಾರೈಸಿದರು.










