ಮಡಿಕೇರಿ NEWS DESK ಜು.29 : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಸಂಪಾಜೆ ಸ್ಥಳೀಯ ಸಂಸ್ಥೆ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ, ಮಡಿಕೇರಿ ರಕ್ತನಿಧಿ ಕೇಂದ್ರ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಜು.31 ರಂದು ಚೆಂಬು ಗ್ರಾಮದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಲಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಂ.ಧನAಜಯ ತಿಳಿಸಿದ್ದಾರೆ. ಚೆಂಬು ಸರಕಾರಿ ಪ್ರೌಢಶಾಲೆ, ಭಗವಾನ್ ಸಂಘ, ಗರುಡ ಯುವ ಬಳಗ, ಸ್ವಾಮಿ ವಿವೇಕಾನಂದ ಯುವಕ ಮಂಡಳಿ, ದಬ್ಬಡ್ಕ ಶ್ರೀ ರಾಮ ಯುವಕ ಮಂಡಳಿ, ಕುದ್ರೆಪಾಯ ಶ್ರೀ ದೇವಿ ಭಜನಾ ಮಂಡಳಿ, ಕಲೇರಿ ಫ್ರೆಂಡ್ಸ್, ಚೆಂಬು ಮಿತ್ರಕೂಟ ಕ್ರೀಡಾ ಸಂಘ, ಗೆಳೆಯರ ಬಳಗ, ಬಾಲಂಬಿ ಕೇಸರಿ ಯುವ ಬಳಗ, ಚೆಂಬು ಗ್ರಾಮಸ್ಥರ ಸಹಕಾರ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚೆಂಬು ಒಕ್ಕೂಟದ ಸಹಯೋಗದೊಂದಿಗೆ ಚೆಂಬು ಸರಕಾರಿ ಪ್ರೌಢಶಾಲೆಯಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಬಿರ ನಡೆಯಲಿದೆ. ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ರಕ್ತದಾನಿಗಳು ಹೆಸರು ನೋಂದಾಯಿಸಿಕೊಳ್ಳಲು ಮತ್ತು ಹೆಚ್ಚಿನ ಮಾಹಿತಿಗೆ ಮೊ.ಸಂ 9844461777 ನ್ನು ಸಂಪರ್ಕಿಸಬಹುದಾಗಿದೆ.











