ಮಡಿಕೇರಿ ಜು.29 NEWS DESK : ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ 65 ನೇ ವಾರ್ಷಿಕ ಮಹಾಸಭೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ರೇಜು ಎಮ್.ಟಿ. ಅವರು 2024 ರ ಮಾರ್ಚ್, 31 ಕ್ಕೆ ಅಂತ್ಯಗೊ0ಡ ಹಣಕಾಸು ವರ್ಷ 2023-24 ರ ಸಂಸ್ಥೆಯ ವಾರ್ಷಿಕ ಕಾರ್ಯಾಚರಣೆಯಲ್ಲಿ ಪರಿಶೋಧಿಸಲ್ಪಟ್ಟ ಲೆಕ್ಕಪತ್ರಗಳ ಪ್ರಮುಖ ಅಂಶಗಳನ್ನು ಹಂಚಿಕೊ0ಡಿದ್ದಾರೆ.
ಪ್ರಸಕ್ತ ಹಣಕಾಸು ವರ್ಷ 2023-24 ನೇ ಸಾಲಿನ ಆರ್ಥಿಕ ಸ್ಥಿತಿಯನ್ನು ಕ್ರೋಢೀಕರಿಸಲಾಗಿದ್ದು, ರೂ.143.28 ಕೋಟಿಗಳ ತೆರಿಗೆ ಪೂರ್ವ ದಾಖಲೆ ಲಾಭ ಹಾಗೂ ರೂ.115.58 ಕೋಟಿಗಳ ತೆರಿಗೆ ನಂತರದ ಲಾಭವನ್ನು ಸಂಸ್ಥೆಯು ಗಳಿಸಿದೆ. ಸಂಸ್ಥೆಯು 2023-24 ರ ಹಣಕಾಸು ವರ್ಷದಲ್ಲಿ ವಿವಿಧ ಸಾಲ ಯೋಜನೆಗಳ ಮೂಲಕ ರೂ.827.13 ಕೋಟಿಗಳ ಸಾಲ ಮಂಜೂರಾತಿ ಮಾಡಿದ್ದು, ಇದರಲ್ಲಿ ರೂ.775.76 ಕೋಟಿಗಳ ಮೊತ್ತದ ಮಂಜೂರಾತಿಯು 610 ಸೂಕ್ಷö್ಮ ಮತ್ತು ಸಣ್ಣ ಗಾತ್ರದ ಕೈಗಾರಿಕಾ ಉದ್ಯಮಗಳಿಗೆ ನೀಡಲಾಗಿದೆ.
2024ರ ಮಾರ್ಚ್ ಅಂತ್ಯದವರೆಗೆ ಸಂಚಿತ ಸಾಲ ಮಂಜೂರಾತಿಯ ಮೊತ್ತವು ರೂ.20,507.86 ಕೋಟಿಗಳನ್ನು 1,76,486 ಉದ್ಯಮಗಳಿಗೆ ನೀಡಲಾಗಿದೆ. ಈ ಹಣಕಾಸು ವರ್ಷದಲ್ಲಿ ರೂ.613.04 ಕೋಟಿ ಸಾಲ ವಿತರಿಸಿದ್ದು, 2023-24ರ ಮಾರ್ಚ್ ಅಂತ್ಯದವರೆಗೆ ಸಂಚಿತ ವಿತರಣೆಯ ಮೊತ್ತವು ರೂ.15,835.14 ಕೋಟಿಯಾಗಿದೆ. ಹಣಕಾಸು ವರ್ಷ 2023-24 ರಲ್ಲಿ ರೂ.820.85 ಕೋಟಿಗಳ ಸಾಲ ವಸೂಲಾತಿ ಮಾಡಲಾಗಿದೆ ಮತ್ತು ರೂ.257.08 ಕೋಟಿಗಳಷ್ಟು ಬಡ್ಡಿ ಮೊತ್ತವು ವಸೂಲಾತಿಯಾಗಿದೆ. 2024ರ ಮಾರ್ಚ್ ಅಂತ್ಯದವರೆಗೆ ಸಂಚಿತ ವಸೂಲಾತಿಯ ಮೊತ್ತವು ರೂ.20,844.49 ಕೋಟಿಯಾಗಿದೆ. ಹಾಗೆಯೇ ಹಿಂದಿನ ಹಣಕಾಸು ವರ್ಷ 2022-23ರಲ್ಲಿ ಶೇ.3.51 ರಷ್ಟು ಇದ್ದ ನಿವ್ವಳ ಅನುತ್ಪಾದಕ ಆಸ್ತಿಯು ಪ್ರಸಕ್ತ ಹಣಕಾಸು ವರ್ಷ 2023-24ರಲ್ಲಿ ಶೇ.3.43ಕ್ಕೆ ಇಳಿಕೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಸ್ಥೆಯು ಸ್ಥಾಪಿತ ದಿನದಿಂದ ಮಾರ್ಚ್ 31, 2024ರ ಅಂತ್ಯದವರೆಗೆ 31,706 ಕ್ಕೂ ಹೆಚ್ಚಿನ ಮಹಿಳಾ ಉದ್ಯಮಿಗಳಿಗೆ ರೂ.5,174.09 ಕೋಟಿಗಳ ಸಾಲ ಮಂಜೂರಾತಿ ಮಾಡಲಾಗಿದೆ. ಮುಂದುವರೆದು 22,636 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ ರೂ.3,082.67 ಕೋಟಿಗಳಿಗೂ ಅಧಿಕ ಸಾಲ ಮಂಜೂರಾತಿ ನೆರವು ನೀಡಿದ್ದಾರೆ. ಹಾಗೆಯೇ 41,321 ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಉದ್ಯಮಿಗಳಿಗೂ ಸುಮಾರು ರೂ.1,993.50 ಕೋಟಿಗಳ ಸಾಲ ಮಂಜೂರಾತಿ ನೀಡಲಾಗಿದೆ.
ಪ್ರಸಕ್ತ ಹಣಕಾಸು ವರ್ಷ 2023-24 ರಲ್ಲಿ ಸಂಸ್ಥೆಯು ರಾಜ್ಯ ಸರ್ಕಾರದ ಬೆಂಬಲದೊ0ದಿಗೆ ರೂಪಿತವಾದ ವಿವಿಧ ಬಡ್ಡಿ ಸಹಾಯಧನ ಸಾಲ ಯೋಜನೆಗಳಲ್ಲಿ ಸಾಲ ಮಂಜೂರಾತಿ ಮಾಡಲಾಗಿದೆ. ಮಹಿಳಾ ಉದ್ಯಮಿಗಳಿಗೆ ಲಭ್ಯವಿರುವ ಶೇ:4 ರ ಬಡ್ಡಿದರ ಸಹಾಯಧನ ಸಾಲ ಯೋಜನೆಯಡಿಯಲ್ಲಿ 103 ಮಹಿಳಾ ಉದ್ಯಮಿಗಳಿಗೆ ರೂ.165.91 ಕೋಟಿಗಳ ಸಾಲ ಮಂಜೂರಾತಿ ಮಾಡಲಾಗಿದೆ. ಈ ಯೋಜನೆಯಡಿ 31 ನೇ ಮಾರ್ಚ್ 2024ರ ಅಂತ್ಯದವರೆಗೆ ಒಟ್ಟು ರೂ.1,214.39 ಕೋಟಿಗಳ ಸಂಚಿತ ನೆರವು 1,460 ಮಹಿಳಾ ಉದ್ಯಮಿಗಳಿಂದ ಸ್ಥಾಪಿಸಲ್ಪಟ್ಟ ಉದ್ಯಮಗಳಿಗೆ ನೀಡಲಾಗಿದೆ.
ಸೂಕ್ಷö್ಮ ಹಾಗೂ ಸಣ್ಣ ಪ್ರಮಾಣದ ಉತ್ಪಾದನಾ ಘಟಕಗಳಿಗೆ ಲಭ್ಯವಿರುವ ಶೇ.5.5ರ ಬಡ್ಡಿ ಸಹಾಯಧನ ಸಾಲ ಯೋಜನೆಯಡಿಯಲ್ಲಿ 240 ಘಟಕಗಳಿಗೆ ರೂ.295.85 ಕೋಟಿಗಳ ಸಾಲ ಮಂಜೂರಾತಿ ಮಾಡಲಾಗಿದೆ. ಈ ಯೋಜನೆಯಡಿಯಲ್ಲಿ ಈ ಹಣಕಾಸು ವರ್ಷದ ಅಂತ್ಯದವರೆಗೆ, 1,439 ಉದ್ಯಮಗಳಿಗೆ ರೂ.1,658.03 ಕೋಟಿಗಳ ಸಂಚಿತ ನೆರವು ನೀಡಲಾಗಿದೆ.
ಹಾಗೆಯೇ ಈ ವರ್ಷದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಲಭ್ಯವಿರುವ ಶೇ.4ರ ಬಡ್ಡಿ ಸಹಾಯಧನ ಸಾಲ ಯೋಜನೆಯಡಿ 269 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ರೂ.315.67 ಕೋಟಿಗಳ ಸಾಲ ಮಂಜೂರಾತಿ ಮಾಡಲಾಗಿದೆ. ಈ ಯೋಜನೆಯಡಿಯಲ್ಲಿ ಈ ಹಣಕಾಸು ವರ್ಷದ ಅಂತ್ಯದವರೆಗೆ ರೂ.2,544.51 ಕೋಟಿಗಳ ಸಂಚಿತ ನೆರವನ್ನು 3,993 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಂದ ಸ್ಥಾಪಿಸಲ್ಪಟ್ಟ ಉದ್ಯಮಗಳಿಗೆ ನೀಡಲಾಗಿದೆ.
2023-24ರ ಹಣಕಾಸು ವರ್ಷದಲ್ಲಿ ಕರ್ನಾಟಕ ಸರ್ಕಾರವು ಸಂಸ್ಥೆಗೆ ರೂ.159.67 ಕೋಟಿಗಳ ಬಡ್ಡಿ ಸಹಾಯಧನ ಸಾಲ ಯೋಜನೆಗಳಿಗೆ ಪೂರಕ ನೆರವು ಒದಗಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ಯಮಿಗಳು ಸ್ಥಾಪಿಸುವ ಜವಳಿ ಮತ್ತು ಕೈಮಗ್ಗ ಉದ್ಯಮಗಳಿಗೆ ವಿಶೇಷ ಅನುದಾನ ಯೋಜನೆಯಡಿಯಲ್ಲಿ ಕರ್ನಾಟಕ ಸರ್ಕಾರವು ರೂ.12.75 ಕೋಟಿಗಳ ಅನುದಾನ ಬಿಡುಗಡೆ ಮಾಡಿದೆ ಅವರು ತಿಳಿಸಿದ್ದಾರೆ.
ಸಂಸ್ಥೆಯು ಹಣಕಾಸು ವರ್ಷ 2024-25ರಲ್ಲಿ ರೂ.1,100.00 ಕೋಟಿಗಳ ಸಾಧಾರಣ ಸಾಲ ಮಂಜೂರಾತಿ ಗುರಿ ಹೊಂದಿದ್ದು ಗುಣಮಟ್ಟದ ಉದ್ಯಮಗಳಿಗೆ ಹಣಕಾಸು ನೆರವು ನೀಡಿ ಆರ್ಥಿಕ ಅಭಿವೃದ್ಧಿಯ ದೂರದೃಷ್ಟಿ ಹೊಂದಿದೆ. 2023-24ರ ಹಣಕಾಸು ವರ್ಷದಲ್ಲಿ ರಾಜ್ಯ ಸರ್ಕಾರದ ಬೆಂಬಲದೊAದಿಗೆ ಸಂಸ್ಥೆಯು ಹಿಂದುಳಿದ ವರ್ಗUಳ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಉದ್ಯಮಶೀಲತೆ ಉತ್ತೇಜಿಸಲು ನೂತನವಾಗಿ ಶೇ:5.5ರ ಬಡ್ಡಿ ಸಹಾಯಧನ ಸಾಲ ಯೋಜನೆಗಳನ್ನು ಹಿಂದುಳಿದ ವರ್ಗಗಳ (ಪ್ರವರ್ಗ-1 ಮತ್ತು ಪ್ರವರ್ಗ-2ಎ ಜಾತಿಗಳಿಗೆ) ಉದ್ಯಮಿಗಳಿಗೆ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಉದ್ಯಮಿಗಳಿಗೆ ಅನುಷ್ಠಾನಗೊಳಿಸಲಾಗಿದೆ. ಹಾಗೆಯೇ ಚಾಲ್ತಿಯಲಿರುವ ಮಹಿಳಾ ಉದ್ಯಮಿಗಳಿಗೆ ಲಭ್ಯವಿರುವ ಶೇ.4ರ ಬಡ್ಡಿದರ ಸಹಾಯಧನ ಸಾಲ ಯೋಜನೆಯ ಗರಿಷ್ಠ ಮೊತ್ತವನ್ನು ರೂ.2.00 ಕೋಟಿಗಳಿಂದ ರೂ.5.00 ಕೋಟಿಯವರೆಗೆ ಹೆಚ್ಚಿಸಲಾಯಿತು.
ಈಗಾಗಲೇ ಚಾಲ್ತಿಯಲ್ಲಿರುವ ಸೂಕ್ಷ್ಮ ಹಾಗೂ ಸಣ್ಣ ಪ್ರಮಾಣದ ಉತ್ಪಾದನಾ ಘಟಕಗಳಿಗೆ ಲಭ್ಯವಿರುವ ಶೇ.5.5ರ ಬಡ್ಡಿ ಸಹಾಯಧನ ಸಾಲ ಯೋಜನೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಲಭ್ಯವಿರುವ ಶೇ.4ರ ಬಡ್ಡಿ ಸಹಾಯಧನ ಸಾಲ ಯೋಜನೆಗಳಡಿಯಲ್ಲಿ ಯಶ್ವಸಿಯಾಗಿ ಹಣಕಾಸಿನ ನೆರವನ್ನು ನೀಡಲಾಗುತ್ತಿದೆ.
ಮುಂಬರುವ ಹಣಕಾಸು ವರ್ಷ 2024-25 ರಲ್ಲಿ ಸಂಸ್ಥೆಯಲ್ಲಿ ಲಭ್ಯವಿರುವ ಎಲ್ಲಾ ಐದು ಬಡ್ಡಿ ಸಹಾಯಧನ ಸಾಲ ಯೋಜನೆಗಳಿಂದ ಉದ್ದೇಶಿತ ಸಾಲ ಮಂಜೂರಾತಿ ಹಾಗೂ ವಿತರಣೆಯ ಗುರಿ ಸಾಧಿಸಲು ಅನುಕೂಲವಾಗುವ ನಿರೀಕ್ಷೆಯಿದೆ. ಅಲ್ಲದೆ ಅನುತ್ಪಾದಕ ಆಸ್ತಿಗಳನ್ನು ಮತ್ತಷ್ಟು ಕಡಿಮೆಗೊಳಿಸಲು ಸಂಸ್ಥೆಯು ಹೆಚ್ಚಿನ ಒತ್ತು ನೀಡಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ಶಿವಣ್ಣ ಅವರು ಮಾಹಿತಿ ನೀಡಿದ್ದಾರೆ .