ಇನ್ಫೋಸಿಸ್ ಸೀನಿಯರ್ ಪ್ರಾಂಶುಪಾಲ ಆರ್.ಕೆ.ಕಿರಣ್ ಮಾತನಾಡಿ, ಪವರ್ ಬಿಐ ತಂತ್ರಾಂಶವು ದತ್ತಾಂಶ ವಿಶ್ಲೇಷಣೆಯಲ್ಲಿ ಹೇಗೆ ಸಹಕಾರಿಯಾಗಿದೆ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ರ್ಯಕ್ರಮದಲ್ಲಿ ಸಿ.ಐ.ಟಿ.ಪ್ರಾಧ್ಯಾಪಕ ವೃಂದ ಮತ್ತು ಬೋಧಕೇತರ ವೃಂದ ಹಾಗೂ ವಿವಿಧ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು. ಅತ್ಯಾಧುನಿಕ ಎಐ ತಂತ್ರಜ್ಞಾನ ಬಳಸಿ ಮಾನವ ತದ್ರೂಪಿಯಾದ ಅವಿನ್ಯ ನಿರೂಪಣೆಯೂ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗಮನ ಸೆಳೆಯಿತು. ಎಐ ಮತ್ತು ಎಂಎಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ. ಬಿ.ಬಿ.ರಾಮಕೃಷ್ಣ ಸ್ವಾಗತಿಸಿದರು. ನಾಲ್ಕನೇ ಸೆಮಿಸ್ಟರ್ ಇಂಜಿನಿಯರಿAಗ್ ವಿಭಾಗ ವಿದ್ಯಾರ್ಥಿನಿ ಜಾನವಿ ವಂದಿಸಿದರು. ಎಐ ಅಪ್ರಿಸಿಯೇಷನ್ ದಿನಾಚರಣೆಯ ಪ್ರಯುಕ್ತ ಎಐ ಮತ್ತು ಎಂಎಲ್ ಇಂಜಿನಿಯರಿAಗ್ ವಿಭಾಗದ ವತಿಯಿಂದ ವಿವಿಧ ಸ್ಪರ್ಧೆಯನ್ನು ನಡೆಯಿತು. ಇದೇ ಸಂದರ್ಭ ಕೋಡಿಂಗ್ ಸ್ಪರ್ಧೆಯಾದ ಕೋಡೋಥಾನ್ 2.0 ಮತ್ತು ಉತ್ಕರ್ಷ್ 2.0 ಮಿನಿ ಪ್ರಾಜೆಕ್ಟ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬೆಂಗಳೂರಿನ ಕೊಕೇನ್ ರೊಬೊಟಿಕ್ಸ್ ನಿರ್ದೇಶಕರಾದ ಎ.ಕೆ.ಮಾಚಮ್ಮ, ಸಿ.ಐ.ಟಿ. ಎಐ ಮತ್ತು ಎಂಎಲ್ ಇಂಜಿನಿಯರಿಂಗ್ ವಿಭಾಗದ ಆರನೇ ಸೆಮಿಸ್ಟರ್ ನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಂಟರ್‌ಶಿಪ್ ಪ್ರಮಾಣಪತ್ರ ನೀಡಿದರು.