
ವಿರಾಜಪೇಟೆ NEWS DESK ಜು.29 : ಕೊಂಚ ಬಿಡುವು ನೀಡಿದ್ದ ಮಳೆ ಸೋಮವಾರ ಧಾರಾಕಾರವಾಗಿ ಸುರಿದ ಪರಿಣಾಮ ವಿರಾಜಪೇಟೆ ಗೋಣಿಕೊಪ್ಪ ರಸ್ತೆಯ ರಾಜ ಕಾಲುವೆ ಬಳಿ ಪ್ರವಾಹ ಸದೃಶ್ಯ ಕಂಡು ಬಂತು. ಮತ್ತೆ ಮಳೆನೀರು ಮುಖ್ಯ ರಸ್ತೆಯನ್ನು ಆವರಿಸಿತು. ವಿರಾಜಪೇಟೆ ಖಾಸಗಿ ಬಸ್ ನಿಲ್ದಾಣ, ಅರಸು ನಗರ, ಮಟನ್ ಮಾರ್ಕೆಟ್, ಸುಭಾಷ್ ನಗರ, ವಿಜಯನಗರ , ಚೌಕಿ. ಮುಂತಾದ ಕಡೆಗಳಿಂದ ಮಳೆ ನೀರು ಹರಿದು ಇದೇ ಕಾಲುವೆಯನ್ನು ಸೇರುತ್ತದೆ. ವಿದ್ಯಾರ್ಥಿಗಳು ಹಾಗೂ ಪಾದಾಚಾರಿಗಳು ಮಳೆ ಮತ್ತು ಪ್ರವಾಹದ ರೀತಿಯ ನೀರಿನಿಂದ ಪರದಾಡುವಂತ್ತಾಯಿತು. ಮುಂದಿನ ದಿನಗಳಲ್ಲಿ ಈ ರೀತಿಯ ಪರಿಸ್ಥಿತಿ ಉದ್ಭವಿಸದಂತೆ ಆಡಳಿತ ವ್ಯವಸ್ಥೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.










