ಮಡಿಕೇರಿ ಆ.1 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಬೊಳ್ಳುಮಾಡು ಗ್ರಾಮದಲ್ಲಿ ಆ.14 ರಂದು “ಬೇಲ್ ನಮ್ಮೆ” ಕಾರ್ಯಕ್ರಮ ನಡೆಯಲಿದೆ.
ಬೊಳ್ಳುಮಾಡು ಗ್ರಾಮದ ಮಾತಂಡ ಕುಟುಂಬಸ್ಥರ ಗದ್ದೆಯಲ್ಲಿ ಬೆಳಗ್ಗೆ 9.30 ಗಂಟೆಗೆ ನಡೆಯಲಿದ್ದು, ರಾಜ್ಯ ಕೃಷಿ ಸಚಿವರು ಹಾಗೂ ಜಿಲ್ಲೆಯ ಶಾಸಕರೂ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಮ್ಮೆಯ ಪ್ರಯುಕ್ತ ಓಟಾಕ ಓಟ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಓಟಾಕ ಓಟದಲ್ಲಿ ಪುರುಷರು, ಮಹಿಳೆಯರು, ಬಾಲಕರು ಹಾಗೂ ಬಾಲಕಿಯರು ಸೇರಿದಂತೆ ನಾಲ್ಕು ವಿಭಾಗಗಳಿದ್ದು,
ಓಟಾಕ ಓಟದಲ್ಲಿ ಪುರುಷ ಹಾಗೂ ಮಹಿಳೆಯರ ವಿಭಾಗದ ಪ್ರಥಮ ವಿಜೇತರಿಗೆ ಕೋರಿಕೊಡೆ, ನಗದು ರೂ.2000, ದ್ವಿತೀಯ ರೂ.1500 ಹಾಗೂ ತೃತೀಯ ರೂ.1000 ಹಾಗೂ ಸ್ಮರಣಿಕೆ, ಅಭಿನಂದನಾ ಪತ್ರ, ಬಾಲಕರಿಗೆ ಮತ್ತು ಬಾಲಕಿಯರಿಗೆ ಪ್ರಥಮ ರೂ.1500, ದ್ವಿತೀಯ ರೂ.1000 ಹಾಗೂ ತೃತೀಯ 700 ಸ್ಮರಣಿಕೆ, ಅಭಿನಂದನಾ ಪತ್ರ ನೀಡಲಾಗುವುದು.
ಹಗ್ಗ ಜಗ್ಗಾಟದಲ್ಲಿ ಪುರುಷರು ಹಾಗೂ ಮಹಿಳೆಯರು ಸೇರಿ 2 ವಿಭಾಗಗಳಿದ್ದು, ಹಗ್ಗ ಜಗ್ಗಾಟದಲ್ಲಿ ಪ್ರಥಮ ಬಹುಮಾನವಾಗಿ ರೂ.10,000 ಹಾಗೂ ಸ್ಮರಣಿಕೆ ಅಭಿನಂದನಾ ಪತ್ರ, ದ್ವಿತೀಯ ರೂ.7,000 ಸ್ಮರಣಿಕೆ ಅಭಿನಂದನಾ ಪತ್ರ ನೀಡಲಾಗುವುದು.
ಹಗ್ಗ ಜಗ್ಗಾಟದ ತಂಡದಲ್ಲಿ 7+1ರಂತೆ ಸ್ಪರ್ಧಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಕೊಡವ ಅಕಾಡೆಮಿಯ ಷರತ್ತು ಹಾಗೂ ನಿಬಂಧನೆಗಳಿಗೆ ಅನ್ವಯವಾಗುವಂತೆ, ಸ್ಪರ್ಧಾರ್ಥಿಗಳು 12.08.2024 ಸಾಯಂಕಾಲ 5.00 ಗಂಟೆಯ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ0ತೆ ಅಕಾಡೆಮಿಯ ಪ್ರಕಟಣೆಯಲ್ಲಿ ಕೋರಲಾಗಿದೆ. ಸಂಪರ್ಕ ಸಂಖ್ಯೆ ಕೊಡವ ಸಾಹಿತ್ಯ ಅಕಾಡೆಮಿ ಕಛೇರಿ 08272-229074 / 9900271887 ಅಥವಾ 8971958996 ಸಂಪರ್ಕಿಸಬಹುದಾಗಿದೆ ಎಂದು ಅಕಾಡೆಮಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದೆ.