ಮಡಿಕೇರಿ ಆ.8 NEWS DESK : ಬಾಳೆಲೆ ವಿಜಯಲಕ್ಷ್ಮಿ ಪ್ರೌಢ ಶಾಲೆ, ಕಾಕೂರು ಜೆಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಕಳತ್ ಮಾಡ್ ಪ್ರೌಢಶಾಲೆಯಲ್ಲಿ ವಿಶ್ವ ಶಾಂತಿಗಾಗಿ ಲೇಖನಿ ಅಭಿಯಾನ ನಡೆಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಚಂದ್ರಶೇಕರ್ ಮಾತನಾಡಿ ಲೇಖನಿಯ ಮಹತ್ವವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಲೇಖನಿ ಖಡ್ಗ ಕ್ಕಿಂತ ಹರಿತವಾದದ್ದು, ಲೇಖನಿ ಹಿಡಿಯಿರಿ ವಿಶ್ವ ಮಾನವರಾಗಿ, ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ, ವಿಶ್ವ ಶಾಂತಿ, ಲೇಖನಿ ಹಿಡಿಯಿರಿ ವಿಶ್ವ ಮಾನವರಾಗಿ, ಸಮಾಜದಲ್ಲಿ ತತ್ವ – ಸಿದ್ದಾಂತವನ್ನು ಬೆಂಬಲಿಸಬೇಕು, ಶಿಕ್ಷಣ ಪ್ರತಿಯೊಬ್ಬರು ಪಡೆಯಬೇಕು, ಪ್ರತಿಯೊರ್ವ ಹೆಣ್ಣುಮಕ್ಕಳು ಶಿಕ್ಷಣ ಪಡೆಯಬೇಕು, ಲೇಖನಿ ಮೂಲಕ ಮಾನವೀಯ ಸಂದೇಶ, ಲೇಖನಿ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಸಮಾಜವನ್ನು ಶಾಂತಿ ಮಾರ್ಗದ ಕಡೆಗೆ ನಡೆಸುತ್ತದೆ, ಲೇಖನಿ ಹಿಡಿದು ಶಿಕ್ಷಕರಾಗಬಹುದು, ಡಾಕ್ಟರ್ ರಾಗಬಹುದು, ವಿಜ್ಞಾನಿ ಯಾಗಬಹುದು, ರೈತರಾಗಬಹುದು, ಯುದ್ಧ ಬೇಡ, ಶಾಂತಿ ಬೇಕು, ಲೇಖನಿಯನ್ನು ಗೌರವಿಸಿ, ಲೇಖನಿ ಹಿಡಿಯಿರಿ ಮೌಡ್ಯ ಮುಕ್ತ ಸಮಾಜ ನಿರ್ಮಾಣ ಮಾಡೋಣ, ಶಿಕ್ಷಣ ಪ್ರತಿಯೊಬ್ಬರ ಹಕ್ಕು ಸಮಾಜದಲ್ಲಿ ಅಕ್ಷರ ಕ್ರಾಂತಿ ಈ ಮೂಲಕ ವಿಶ್ವ ಶಾಂತಿ ಎಂಬ ಘೋಷವಾಕ್ಯಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು. ಶಿಕ್ಷಕರಾದ ಎಂ.ಪಿ ರಾಘವೇಂದ್ರ, ಡಿ.ಎನ್.ಸುಬ್ಬಯ್ಯ, ಬೆಂಡಿಕ್ಟ್ ಫರ್ನಾಂಡಿಸ್, ತಿಮ್ಮರಾಜ್, ಎ.ಎ0.ಜಯಣ್ಣ, ಪ್ರಭು ಕುಮಾರ್, ಚಂದ್ರವತಿ ಹಾಜರಿದ್ದರು. ಕಾರ್ಯಕ್ರಮದ ಸಂಚಾಲಕಿ ಕೆ.ಟಿ.ವಾತ್ಸಲ್ಯ ತಾವೇ ತಯಾರಿಸಿದ ಲೇಖನಿ ಯನ್ನು ಶಾಲೆಗೆ ನೀಡುವುದರ ಮೂಲಕ ಶಾಲೆಯ ಕಾರ್ಯಕ್ರಮ ಯಶಸ್ವಿಗೊಳಿಸಿದರು.