ಮಡಿಕೇರಿ ಆ.9 NEWS DESK : ತಾಳತ್ತಮನೆಯ ಶ್ರೀ ದುರ್ಗಾಭಗವತಿ ದೇವಾಲಯದಲ್ಲಿ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ದೇವಾಲಯದಲ್ಲಿರುವ ನಾಗನ ಕಟ್ಟೆಯ ನಾಗನಕಲ್ಲಿಗೆ ಹಾಲಿನ ಅಭಿಷೇಕ, ಅಲಂಕಾರ ಪೂಜೆ, ಎಳನೀರಭಿಷೇಕ, ಕ್ಷೀರಾಭಿಷೇಕ, ಸಂಕಲ್ಪ ಪೂಜೆ ಮಹಪೂಜೆ ಹಾಗೂ ವಿಶೇಷ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಗನ ಕಲ್ಲಿಗೆ ಪುಷ್ಪಾರ್ಚನೆ ಮತ್ತು ಹಾಲಿನ ಅಭಿಷೇಕ ಮಾಡಿದರು.










