ಮಡಿಕೇರಿ ಆ.9 NEWS DESK : 2020-21 ರಲ್ಲಿ ಅಥವಾ ನಂತರ ಐ.ಟಿ.ಐ ಉತ್ತೀರ್ಣರಾಗಿರುವ, ತಾಂತ್ರಿಕ ಕೌಶಲ್ಯದ ಕೋರ್ಸ್‍ನಲ್ಲಿ ಪ್ರಮಾಣ ಪತ್ರ ಹೊಂದಿರುವ 18 ರಿಂದ 23 ವರ್ಷ ವಯೋಮಿತಿಯವರಾಗಿ ದುಬೈ ಶಿಪ್‍ಯಾರ್ಡ್‍ನಲ್ಲಿ ತರಬೇತಿ/ ನೇಮಕಾತಿಗೆ ಅವಕಾಶ ಕಲ್ಪಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ತರಬೇತಿ, ಉಚಿತ ವಿಮಾನ ಟಿಕೆಟ್, ಉಚಿತ ವಸತಿ, ಆರೋಗ್ಯ ವಿಮೆ, ವಾರ್ಷಿಕ ರಜೆಗಳು ಹಾಗೂ ಹಿಂದಿರುಗುವ ಪ್ರಯಾಣದ ವಿಮಾನ ಟಿಕೇಟ್ ಸೌಲಭ್ಯಗಳಿವೆ. ಅರ್ಜಿ ಸಲ್ಲಿಸಲು ಆ.11 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ ವಿಳಾಸ http://imck.kaushalkar.com/ ಹಾಗೂ ಮೊ.ಸಂ.9483223884 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಹಾಗೂ ಉದ್ಯೋಗಾಧಿಕಾರಿ ರೇಖಾ ಗಣಪತಿ ತಿಳಿಸಿದ್ದಾರೆ. 









