ನಾಪೋಕ್ಲು ಆ.9 NEWS DESK : ಮರಂದೋಡ ಗ್ರಾಮದಲ್ಲಿ ಕಾಡಾನೆಗಳ ದಾಳಿಯಿಂದ ಭತ್ತದ ಗದ್ದೆಗಳು ಹಾನಿಗೀಡಾಗಿದ್ದು, ಕೃಷಿಕರು ಆತಂಕ ಪಡುವಂತಾಗಿದೆ. ಗ್ರಾಮದ ಕೃಷಿಕರಾದ ಚೋಯಮಾದಂಡ ಪೂಣಚ್ಚ, ವಿಜು ಮೊಣ್ಣಪ್ಪ,ಸರು ಅಪ್ಪಚ್ಚು ಅವರ ಗದ್ದೆಗಳಲ್ಲಿ ಅಡ್ಡಾಡಿರುವ ಕಾಡಾನೆಗಳು ನಾಟಿ ಮಾಡಿದ್ದ ಪೈರುಗಳನ್ನು ತುಳಿದು ನಾಶಪಡಿಸಿವೆ. ಸಮೀಪದ ಕಾಫಿ ತೋಟಗಳಿಗೂ ನುಗ್ಗಿ ಹಾನಿಪಡಿಸಿದೆ. ಕಳೆದ ಹತ್ತು ದಿನಗಳಿಂದ ಕಾಡಾನೆಗಳು ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಗ್ರಾಮದಲ್ಲಿ ಹಾಗಲಿನ ವೇಳೆಯೆ ಕಾಡಾನೆಗಳ ಓಡಾಡುತ್ತಿದ್ದು, ಕೂಲಿಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇತೆರೆಡೆ ತೆರಳಲು ಭಯಪಡುವಂತಾಗಿದೆ ಎಂದು ಪಂಚಾಯಿತಿ ಸದಸ್ಯ ಹರೀಶ್ ಮೊಣ್ಣಪ್ಪ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ವರದಿ : ದುಗ್ಗಳ ಸದಾನಂದ










