ವಿರಾಜಪೇಟೆ ಆ.9 NEWS DESK : ವಿರಾಜಪೇಟೆಯ ಕೂರ್ಗ್ ವ್ಯಾಲಿ ಶಾಲೆಯ2024-25 ನೇ ಸಾಲಿನ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ವಿರಾಜಪೇಟೆ ಕಾವೇರಿ ಕಾಲೇಜಿನ ಉಪನ್ಯಾಸಕರಾದ ಡಾ.ಕೆ.ಜಿ.ವೀಣಾ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಬದ್ಧತೆಯ ಜೊತೆಗೆ ಬದುಕಿಗೆ ಪೂರಕವಾದ ಮೌಲ್ಯಗಳನ್ನು ಅರಿಯುವತ್ತ ಗಮನ ಹರಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವದ ಗುಣಗಳನ್ನು ರೂಢಿಸಿಕೊಳ್ಳಬೇಕು ಮತ್ತು ಪೋಷಕರು ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ನೀತಿ ಕಥೆಯನ್ನು ಹೇಳಿಕೊಡುವುದರಿಂದ ವ್ಯಕ್ತಿತ್ವದಲ್ಲಿ ಬದಲಾವಣೆ ಮಾಡಬಹುದು ಎಂದು ಹೇಳಿದರು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರ ಮತ್ತು ಪೋಷಕರ ಪಾತ್ರ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು. ಮುಖ್ಯ ಶಿಕ್ಷಕರು ಮತ್ತು ಶಾಲೆಯ ನಿರ್ವಾಹಕರಾದ ಸುಮಾ, ಚಿತ್ರ ಬಾನು ವಿದ್ಯಾರ್ಥಿ ಸಂಘಕ್ಕೆ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕೂರ್ಗ್ ವ್ಯಾಲಿ ಶಾಲೆಯ ವಿದ್ಯಾರ್ಥಿ ತಂಡದ ಹಿರಿಯ ವಿದ್ಯಾರ್ಥಿಯಾಗಿ ಮಹಮ್ಮದ್ ರಫಾನ ಹಾಗೂ ಹಿರಿಯ ವಿದ್ಯಾರ್ಥಿನಿಯಾಗಿ ಸಮೈರ ಬಾನು ಶಾಲಾ ನಾಯಕನಾಗಿ ನರೇಂದ್ರ, ಶಾಲಾ ಉಪನಾಯಕನಾಗಿ ಸಮರ್ಥ್, ಕ್ರೀಡಾ ನಾಯಕನಾಗಿ ಲವೀನ್, ಉಪನಾಯಕನಾಗಿ ಲಿಖಿತ್ , ರೆಡ್ ಹೌಸ್ ನಾಯಕ ನಾಯಕಿಯಾಗಿ ಪೂಜಾ ಹಾಗೂ ಯಶ್ವಂತ್, ಬ್ಲೂ ಹೌಸ್ ನಾಯಕರು ಮತ್ತು ನಾಯಕಿಯಾಗಿ ಸಿಬಿನ್, ಅನಸ್ ಮತ್ತು ಅರ್ಚನ, ಗ್ರೀನ್ ಹೌಸ್ ನಾಯಕ ನಾಯಕಿಯಾಗಿ ನವ್ಯ ಮತ್ತು ಇಸಾಕ್, ಎಲ್ಲೋ ಹೌಸ್ ನಾಯಕ ನಾಯಕಿಯಾಗಿ ಡಿಪಿನ್ ಮತ್ತು ಸುಹೈಮ ಜವಾಬ್ದಾರಿಗಳನ್ನು ವಹಿಸಿಕೊಂಡು ಪ್ರಮಾಣ ವಚನವನ್ನು ಸ್ವೀಕರಿಸಿದರು. ವೇದಿಕೆಯಲ್ಲಿ ಶಾಲೆಯ ಸಂಸ್ಥಾಪಕರಾದ ಎಂ.ಕೆ.ಚಿತ್ರಬಾನು ಮತ್ತು ಸಹ ನಿರ್ವಾಹಕರಾದ ಅನ್ನಮ್ಮ ಮೇರಿ, ಪೋಷಕರು ಬೋಧಕ ಮತ್ತು ಬೋಧಕೇತರ ವೃಂದದವರು ಹಾಜರಿದ್ದರು. ಶಾಲೆಯ ಶಿಕ್ಷಕರುಗಳಾದ ಮಂಜು ಅತಿಥಿಗಳನ್ನು ಹಾಗೂ ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಗಗನ್ ಪರಿಚಯಿಸಿದರು. ಸುರಭಿ ಸ್ವಾಗತಿಸಿದರು, ಮಿಲನ ವಂದಿಸಿದರು, ಬಿಂದು ಕಾರ್ಯಕ್ರಮವನ್ನು ನಿರೂಪಿಸಿದರು.










