ಮಡಿಕೇರಿ ಆ.16 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ “ಕೊಡವ ಕಥೆ ಜೊಪ್ಪೆ”ಯನ್ನು ಹೊರತರಲು ಸೂಕ್ತ ಕತೆಗಳನ್ನು ಆಹ್ವಾನಿಸಿದೆ. ಸುಮಾರು 25 ರಿಂದ 30ರಷ್ಟು ಕತೆಗಳನ್ನು ಒಂದೇ ಪುಸ್ತಕದಲ್ಲಿ ಪ್ರಕಟಿಸಲಾಗುವುದು. ಕತೆಗಳನ್ನು ಎ 4 ಅಳತೆಯ ಕಾಗದದಲ್ಲಿ ಸ್ಪುಟವಾಗಿ ಬರೆದಿದ್ದು 5-6 ಪುಠಗಳನ್ನು ಮೀರುವಂತಿಲ್ಲ. ಕಥಾವಸ್ತು ಕತೆಗಾರರ ಕಲ್ಪನೆಗೆ ಬಿಟ್ಟಿದ್ದು. ಕತೆಗಳು ಪ್ರತ್ಯಕ್ಷ-ಪರೋಕ್ಷವಾಗಿ ಯಾರದ್ದು ತೇಜೋವಧೆಯಾಗಲಿ, ಜಾತಿ-ಧರ್ಮಗಳ ಭಾವನೆಗಳಿಗೆ ಘಾಸಿ ಉಂಟು ಮಾಡುವುದಾಗಿರಕೂಡದು. ಅಂತಿದ್ದಲ್ಲಿ ಅದರ ಸಾಧಕ-ಭಾದಕಗಳಿಗೆ ಕತೆಗಾರರೇ ಜವಾಬ್ದಾರರಾಗುವುದು. ಕತೆಗಳು ಸಾಧ್ಯವಾದಷ್ಟು ಕೊಡವ ಸಂಸ್ಕೃತಿ-ಪದ್ಧತಿ, ಮೂಲತನಕ್ಕೆ ಒತ್ತುಕೊಡುವಂತಿದ್ದು ಸಾರ್ವಕಾಲಿಕವಾಗಿರಲಿ. ಪ್ರಕಟಿತ ಕಥೆಗಳಿಗೆ ಅಕಾಡೆಮಿ ಗೊತ್ತು ಪಡಿಸಿರುವಂತೆ ಸಂಭಾವನೆ ನೀಡುವುದು. ಕಥೆಗಾರರು ತಮ್ಮ ಸ್ವಪರಿಚಯವನ್ನು 4-5 ವಾಕ್ಯಗಳಿಗೆ ವೀರದಂತೆ ಬರೆದು ಕೊಡುವುದು. ಪ್ರತಿಯೊಬ್ಬ ಕಥೆಗಾರರು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಲಗತ್ತಿಸುವುದು. ಕತೆಗಳನ್ನು ಕಳುಹಿಸಿಕೊಡಲು ಅಂತಿಮ ದಿನಾಂಕ 20.09.2024. ಒಬ್ಬರು ಒಂದಕ್ಕಿಂತ ಹೆಚ್ಚಿನ ಕತೆಗಳನ್ನು ಕಳುಹಿಸುವಂತಿಲ್ಲ. ಕೊಡವ ಕಥೆ ಜೊಪ್ಪೆಗೆ ನಿಮ್ಮ ಕಥೆಗಳನ್ನು ಅಧ್ಯಕ್ಷರು / ರಿಜಿಸ್ಟ್ರಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಜೂನಿಯರ್ ಕಾಲೇಜು ರಸ್ತೆ, ಸ್ಕೌಟ್ಸ್ ಭವನ, ಮ್ಯಾನ್ಸ್ ಕಾಂಪೌಂಡ್, ಮಡಿಕೇರಿ. ಕಳುಹಿಸಬಹುದಾಗಿದೆ ಎಂದು ರಿಜಿಸ್ಟ್ರಾರ್ ಅಜ್ಜಿಕುಟ್ಟಿರ ಸಿ. ಗಿರೀಶ್ ತಿಳಿಸಿದ್ದಾರೆ.










