
ನಾಪೋಕ್ಲು ಆ.16 NEWS DESK : ಬೆಟ್ಟಗೇರಿ ಗ್ರಾಮ ಪಂಚಾಯತಿಯ ಅರ್ವತೋಕ್ಲು ಗ್ರಾಮದ ಬೇಕೋಟು ಮಕ್ಕ ಕ್ಲಬ್ ನ ವತಿಯಿಂದ 78ನೇ ಸ್ವತಂತ್ರೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕ್ಲಬ್‍ನ ಅಧ್ಯಕ್ಷ ಟಿ.ಎಸ್.ವಿವೇಕ್ ಧ್ವಜಾರೋಹಣ ನೆರವೇರಿಸಿ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಡ್ಲೇರ ಎಂ.ಗಣೇಶ್ ಭಾಗವಹಿಸಿ ಮಾತನಾಡಿ, ಬೇಕೋಟ್ ಮಕ್ಕ ಕ್ಲಬ್ ನ ಕಾರ್ಯವೈಖರಿನ್ನು ಶ್ಲಾಘೀಸಿದರು. ಈ ಸಂದರ್ಭ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು. ನೆರೆದಿದ್ದವರಿಗೆ ಸಿಹಿ ಹಂಚಿ, ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳಿಸಲಾಯಿತು.
ವರದಿ : ದುಗ್ಗಳ ಸದಾನಂದ.









