ಮಡಿಕೇರಿ NEWS DESK ಆ.27 : ನಾಗರಹೊಳೆ ಭಾಗದ ವೀರನಹೊಸಹಳ್ಳಿ ಪ್ರಾದೇಶಿಕ ಅರಣ್ಯದಲ್ಲಿ ಜಿಂಕೆ ಭೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪದಡಿ ಕಿರಂಗೂರು ಗೇಟ್ ಬಳಿ ಓರ್ವ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಹನಗೋಡು ಹೋಬಳಿಯ ಭರತವಾಡಿ ಹಾಡಿಯ ರುದ್ರ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತನ ಬಳಿಯಿಂದ 2ಕೆ.ಜಿಯಷ್ಟು ಜಿಂಕೆ ಮಾಂಸ, ಜಿಂಕೆ ಚರ್ಮ, ಕೃತ್ಯಕ್ಕೆ ಬಳಸಿದ್ದ ಬೈಕ್ ಮತ್ತು ಒಂದು ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ತಲೆಮರೆಸಿಕೊಂಡ ಆರೋಪಿಗಳನ್ನು ಕಪ್ಪನಕಟ್ಟೆ ಹಾಡಿಯ ರಾಮು ಹಾಗೂ ಅವ್ವು ಎಂದು ಗುರುತಿಸಲಾಗಿದೆ. ಜಿಂಕೆಯನ್ನು ಭೇಟೆಯಾಡಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಹುಣಸೂರು ವನ್ಯಜೀವಿ ವಿಭಾಗದ ಆರ್.ಎಫ್.ಓ.ಸುಬ್ರಮಣ್ಯ ಕೆ.ಇ, ಆನೆಚೌಕೂರು ವಲಯದ ಡಿಆರ್‌ಎಫ್‌ಓ ಶಿವಕುಮಾರ್, ಗಸ್ತು ಅರಣ್ಯ ಪಾಲಕರು ಹಾಗೂ ಸಿಬ್ಬಂದಿಗಳು ಹನಗೋಡಿಗೆ ಸಮೀಪದ ಕಿರಂಗೂರು ಗೇಟ್ ಬಳಿ ದಾಳಿ ನಡೆಸಿದರು. ತಲೆ ಮರೆಸಿಕೊಂಡ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಚುರುಕುಗೊಂಡಿದೆ.