ವಿರಾಜಪೇಟೆ NEWS DESK ಆ.27 : ಯು ಎಸ್ ಎ ಡ್ಯಾನ್ಸ್ ಸ್ಟುಡಿಯೋ ಅವರ ಅಪ್ಪು ಫಾರೆವರ್ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯ ಆಶ್ರಯದಲ್ಲಿ ನಡೆದ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿರಾಜಪೇಟೆಯ ತನ್ವಿ ದೇಚಮ್ಮ ಕೆ.ಸಿ ಅವರು ಸೋಲೊ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ತನ್ವಿ ದೇಚಮ್ಮ ವಿರಾಜಪೇಟೆಯ ಕೋರಂಡ ಆಶಾ ಅವರ ಪುತ್ರಿಯಾಗಿದ್ದು, ಎಸ್‌ಎಂಎಸ್ ಅಕಾಡೆಮಿ ಆಫ್ ಸೆಂಟ್ರಲ್ ಎಜುಕೇಶನ್ ಅರಮೇರಿ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಇಂಟೋಪೀಸ್ ಡಾನ್ಸ್ ಸ್ಟುಡಿಯೋ ನೃತ್ಯ ಶಾಲೆಯಲ್ಲಿ ನೃತ್ಯ ಅಭ್ಯಾಸ ಮಾಡುತ್ತಿದ್ದು, ನೃತ್ಯ ಸಂಯೋಜಕ ವಿಷ್ಣು ಅವರು ತರಬೇತಿ ನೀಡುತ್ತಿದ್ದಾರೆ.