ವಿರಾಜಪೇಟೆ NEWS DESK ಆ.31 : ಇತ್ತೀಚೆಗೆ ಮೈಸೂರು ವಿಜಯನಗರದ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ 27 ನೇ ಶಿಟೋ ರಿಯೋ ಕರಾಟೆ ಡೋ ನ್ಯಾಷನಲ್ ಚಾಂಪಿಯನ್ ಶಿಪ್ 2024 ಪಂದ್ಯಾವಳಿಯಲ್ಲಿ ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಥಮ ಬಿ. ಎಸ್. ಸಿ ವಿದ್ಯಾರ್ಥಿನಿ ಟಿ. ಪಿ. ಭವ್ಯ ಕುಮಿಟೆ (ಫೈಟಿಂಗ್ )ಸ್ಪರ್ಧೆಯಲ್ಲಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕವನ್ನು ಗೆದ್ದಿದ್ದಾರೆ. ಈ ಮೂಲಕ ಅಂತರರಾಷ್ಟ್ರೀಯ ಮಟ್ಟ ಹಾಗೂ 16 ನೇ ಏಷ್ಯಾ ಫೆಸಿಫಿಕ್ ಶಿಟೋರಿಯೋ ಕರಾಟೆ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾರೆ. ಭವ್ಯ ಇಂಜಿಲಗೆರೆ ನಿವಾಸಿ ನಿವೃತ ಯೋಧ ಪ್ರಕಾಶ್ ಹಾಗೂ ಟಿ.ಪಿ.ದಿವ್ಯ ದಂಪತಿ ಪುತ್ರಿ ಹಾಗೂ ಅಮ್ಮತ್ತಿಯ ಝೆನ್ ಶಿಟೋರಿಯೋ ಕರಾಟೆ ಫೆಡರೇಷನ್ ತರಭೇತುದಾರ ವಿ.ಎನ್.ಪ್ರಸನ್ನ ಅವರ ಶಿಷ್ಯೆ.










