ಕುಶಾಲನಗರ, ಸೆ.2 NEWS DESK : ಕುಶಾಲನಗರ ಪಟ್ಟಣದ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿ ಆಗಸ್ಟ್ ಅಂತ್ಯಕ್ಕೆ ಸೇವಾ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯಿನಿ ಕೆ.ಆರ್.ರಾಣಿ ಅವರಿಗೆ ಶಾಲೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕುಶಾಲನಗರ ಬಾಲಕಿಯರ ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಬಿ.ಎನ್.ಪುಷ್ಪ, ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕಿಯಾಗಿ, ನಂತರ ಮುಖ್ಯ ಶಿಕ್ಷಕಿಯಾಗಿ ಬಡ್ತಿ ಹೊಂದಿ ಒಟ್ಟು 39 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಗೊಳ್ಳುತ್ತಿರುವ ಮುಖ್ಯ ಶಿಕ್ಷಕಿ ರಾಣಿ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿ ವಿದ್ಯಾರ್ಥಿ ವೃಂದ, ಪೋಷಕರು ಹಾಗೂ ಅಧಿಕಾರಿ ವರ್ಗದ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು. ರಾಣಿ ಅವರ ನಿವೃತ್ತಿ ಜೀವನದಲ್ಲಿ ಕೂಡ ಶೈಕ್ಷಣಿಕ ಕ್ಷೇತ್ರದಲ್ಲಿ ಉಲ್ಲಾಸಭರಿತ ಜೀವನ ನಡೆಸಲಿ ಎಂದು ಶುಭಹಾರೈಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖ್ಯ ಶಿಕ್ಷಕಿ ಕೆ.ಆರ್.ರಾಣಿ, ಅಪಾರ ಜ್ಞಾನ ಮತ್ತು ಅನುಭವ ನೀಡಿರುವ ಶಿಕ್ಷಣ ಇಲಾಖೆಯು ಅಗಾಧವಾದುದ್ದು. ಈ ಇಲಾಖೆಯಿಂದ ತಾನು ಹೆಚ್ಚು ಕಲಿಯುವ ಮೂಲಕ ಜ್ಞಾನ ವೃದ್ಧಿಸಿಕೊಂಡು ಇಲಾಖೆಯ ಪ್ರಗತಿಗೆ ಶ್ರಮಿಸಿದ್ದು ಮತ್ತು ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದೇನೆ. ತನಗೆ ತನ್ನ ವೃತ್ತಿ ಜೀವನ ತೃಪ್ತಿ ತಂದಿದೆ. ಶೈಕ್ಷಣಿಕ ಕ್ಷೇತ್ರದ ಕೇಂದ್ರ ಶಾಲೆ ಎಂಬ ಹೆಗ್ಗಳಿಕೆ ಎನಿಸಿದ ಈ ಶಾಲೆಯಲ್ಲಿ ತಮಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಯಿತು .ಪಿ.ಎಂ.ಶ್ರೀ ಶಾಲೆಯಾಗಿ ಮೇಲ್ದರ್ಜೆಗೇರಿರುವ ಈ ಶಾಲೆಯು ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದರು. ಕೂಡಿಗೆ ಸಿ.ಆರ್.ಪಿ,.ಕೆ.ಶಾಂತಕುಮಾರ್ ಮಾತನಾಡಿ, ರಾಣಿ ಅವರ ಸೇವಾ ಕಾರ್ಯತತ್ಪರತೆ ಅನುಕರಣೀಯವಾದುದು ಎಂದರು. ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಗೋಣಿಮರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಸ್.ವಿ.ಸಂತೋಷ್, ಹಿರಿಯ ಶಿಕ್ಷಕಿ ಎಂ.ಎಂ.ಭಾರತಿ ಹಾಗೂ ಇತರೆ ಶಿಕ್ಷಕಿಯರು ಮಾತನಾಡಿದರು. ಬಸವನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿಯರಾದ ವಿಜಯಲಕ್ಷ್ಮಿ, ಎಚ್.ಎಂ.ವೀಣಾ, ಶಾಲೆಯ ಶಿಕ್ಷಕಿಯರಾದ ಬಿ.ಬಿ.ಕುಂಞಮ್ಮ, ವಿ.ಪಿ.ಲತಾ, ಎಚ್.ಎಂ.ನೀಲಮ್ಮ, ಎಂ.ಬಿ.ಜಾನಕಿ,ಕೆ.ಭಾಗ್ಯಮ್ಮ, ಪಿ.ಪಿ.ಭವ್ಯ, ಕೆ.ಎ.ಸಿಂಧೂರಾಣಿ, ಎನ್.ಡಿ.ಸೋಮಶೇಖರ್ ಇತರರು ಇದ್ದರು.
Breaking News
- *ರಾಷ್ಟ್ರೀಯ ಐಕ್ಯತಾ ದಿನ : ಮಡಿಕೇರಿಯಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ*
- *ಮಡಿಕೇರಿಯಲ್ಲಿ ವಿಶ್ವ ಪ್ರತಿಜೀವಕ ನಿರೋಧಕ ಜಾಗೃತಿ ಸಪ್ತಾಹ*
- *ಡಿ.4 ರಿಂದ ಹೈ ಪ್ಲೆಯರ್ಸ್ ಹಾಕಿ ಕಪ್ ಪಂದ್ಯಾವಳಿ*
- *ಕಾವೇರಿ ಸ್ವಾಸ್ಥ್ಯ ಯಾತ್ರೆ : ಕೊಡಗಿನ ವಿವಿಧೆಡೆ ಆರೋಗ್ಯ ತಪಾಸಣಾ ಶಿಬಿರ*
- *ಕೊಡಗು ವಿವಿ ಅಂತರ್ ಕಾಲೇಜು ಗುಡ್ಡ-ಗಾಡು ಓಟ ಸ್ಪರ್ಧೆ : ವಿದ್ಯಾರ್ಥಿಗಳು ದೈಹಿಕ ದೃಢತೆಯನ್ನು ಹೆಚ್ಚಿಸಕೊಳ್ಳಬೇಕು : ಕರ್ನಲ್ ರೆಜಿತ್ ಮುಕುಂದನ್ ಕರೆ*
- *ನ.24ರಂದು ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ ಬಿಡುಗಡೆ*
- *ಮಡಿಕೇರಿ : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಡಿಜಿಟಲ್ ಲೈಬ್ರರಿ ಪೋರ್ಟಲ್ ಉದ್ಘಾಟನೆ*
- *ಭಕ್ತರ ಹರ್ಷೋದ್ಘಾರದ ನಡುವೆ ಶ್ರದ್ಧಾಭಕ್ತಿಯಿಂದ ಜರುಗಿದ ಕುಶಾಲನಗರ ಗಣಪತಿ ರಥೋತ್ಸವ*
- *ಗದ್ದೆಹಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಡುಗೆ*
- *ಸುಂಟಿಕೊಪ್ಪ ಠಾಣಾಧಿಕಾರಿ ಚಂದ್ರಶೇಖರ್ ಗೆ ಸನ್ಮಾನ*