ನಾಪೋಕ್ಲು ಸೆ.2 NEWS DESK : ಕೊಡಗು ನೆಹರು ಯುವ ಕೇಂದ್ರ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಜಿಲ್ಲಾ ಯುವ ಒಕ್ಕೂಟ ಮಡಿಕೇರಿ ಹಾಗೂ ಸಂಪಾಜೆಯ ಪಯಸ್ವಿನಿ ಯುವಕ ಸಂಘದ ವತಿಯಿಂದ ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಾಲಯದ ಆವರಣದಲ್ಲಿ ಪ್ರಥಮ ವರ್ಷದ ಕೆಸರು ಗದ್ದೆ ಗ್ರಾಮೀಣ ಕ್ರೀಡಾಕೂಟ ಸಂಭ್ರಮದಿಂದ ನಡೆಯಿತು. ಕೀಲಾರು ಗದ್ದೆಯಲ್ಲಿ ನಡೆದ ಕೆಸರು ಗದ್ದೆ ಕ್ರೀಡಾಕೂಟವನ್ನು ಶ್ರೀ ಪಂಚಲಿಂಗೇಶ್ವರ ದೇವಾಲಯದ ಪ್ರಧಾನ ಅರ್ಚಕ ಸತ್ಯ ನಾರಾಯಣ ಭಟ್ ನೆರವೇರಿಸಿದರು. ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಚೆಡವು ಆದರ್ಶ್ ಫ್ರೆಂಡ್ಸ್ ತಂಡವು ಪ್ರಥಮ ಸ್ಥಾನ ಪಡೆದುಕೊಂಡದ್ದು, ಸಂಪಾಜೆ ಶ್ರೀ ಮಹಾ ವಿಷ್ಣು ಬಳಗ ಸಂಪಾಜೆ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮುಕ್ತ 510 ಕೆಜಿ ವಿಭಾಗ ದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಶ್ರೀ ವಿಷ್ಣು ಅಡ್ಕ ಪ್ರಥಮ ಸ್ಥಾನ ಗಳಿಸಿದರೆ, ಶ್ರೀ ವಿಷ್ಣು ಸಂಪ್ಯಾ ದ್ವಿತೀಯ ಸ್ಥಾನಗಳಿಸಿತು. ಅಡೂರು ಪ್ರೆಂಡ್ಸ್ ತಂಡ ತೃತೀಯ ಸ್ಥಾನವನ್ನು ಹಾಗೂ ಶ್ರೀ ಮಹಾ ವಿಷ್ಣು ಬಳಗ ಸಂಪಾಜೆ ನಾಲ್ಕನೇ ಸ್ಥಾನ ಪಡೆಯಿತು. ಮಹಿಳೆಯರ ಹಗ್ಗಜಗ್ಗಾಟದಲ್ಲಿ ಚೆಡವು ಆದರ್ಶ ಪ್ರೆಂಡ್ಸ್ ಪ್ರಥಮ ಸ್ಥಾನ ಪಡೆದರೆ, ಪಯಸ್ವಿನಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು ವಾಲಿಬಾಲ್ ಟೂರ್ನಿಯಲ್ಲಿ ಆದರ್ಶ್ ಪ್ರೆಂಡ್ಸ್ ಪ್ರಥಮ ಸ್ಥಾನ ಪಡೆದರೆ ಪಯಸ್ವಿನಿ ಸಂಪಾಜೆ ದ್ವಿತೀಯ ಸ್ಥಾನ ಪಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಯಸ್ವಿನಿ ಯುವಕ ಸಂಘದ ಅಧ್ಯಕ್ಷ ತೀರ್ಥ ಪ್ರಸಾದ್ ದುಗ್ಗಳ ವಹಿಸಿದ್ದರು. ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲೋಕನಾಯಕ್, ಗ್ರಾ.ಪಂ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ, ಜಯಕುಮಾರ್ ಚಿದ್ಕಾರ್, ನವೀನ್ ಕೊಯನಾಡು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಭಾರತೀಯ ಭೂನೆಯ ಬಿಪಿನ್ ದೇವಜನ ಸನ್ಮಾನಿಸಲಾಯಿತು.
ವರದಿ : ದುಗ್ಗಳ ಸದಾನಂದ.