
ಮಡಿಕೇರಿ ಸೆ.2 NEWS DESK : ಅರಕಲಗೂಡು ಮಲ್ಲಿಪಟ್ಟಣದಿಂದ ಶನಿವಾರಸಂತೆಗೆ ಸರಬರಾಜಾಗುತ್ತಿರುವ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ಕೆಪಿಟಿಸಿಎಲ್ ಅವರು ನಿರ್ವಹಿಸಬೇಕಿರುವುದರಿಂದ ಸೆ.4 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 66/11ಕೆವಿ ಶನಿವಾರಸಂತೆ ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಹಂಡ್ಲಿ, ಕೊಡ್ಲಿಪೇಟೆ, ಶನಿವಾರಸಂತೆ, ಆಲೂರು, ಅಂಕನಹಳ್ಳಿ, ಮಣಜೂರು, ಬೀಟಿಕಟ್ಟೆ ಗೋಪಲ್‍ಪುರ, ಬಲ್ಲಾರಳ್ಳಿ, ಬೆಸೂರು, ಊರುಗುತ್ತಿ, ನಿಲುವಾಗಿಲು, ಕ್ಯಾತೆ, ದೊಡ್ಡಕೊಡ್ಲಿ, ನೀರುಗುಂದ, ಕಿತ್ತೂರು ಗೌಡಳ್ಳಿ, ನಿಡ್ತ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.









