ಸುಂಟಿಕೊಪ್ಪ ಸೆ.30 NEWS DESK : ಯಾವುದೇ ರೀತಿಯ ಸಭೆ ಸಮಾರಂಭಗಳನ್ನು ಆಯೋಜಿಸುವಾಗ ವೇದಿಕೆಗೆ ತನ್ನದೆಯಾದ ಶಿಸ್ತು ಘನತೆಯಿದ್ದು, ಆದರ ಬಗ್ಗೆ ಅರಿತು ಆಯೋಜಿಸಿದ್ದಲ್ಲಿ ಮಾತ್ರ ಕಾರ್ಯಕ್ರಮವು ಯಶಸ್ವಿಗೊಳ್ಳಲಿದೆ ಎಂದು ಲೆಕ್ಕ ಪರಿಶೋಧಕ ಪಿ.ಡಬ್ಲ್ಯು. ಪ್ರಾನ್ಸಿಸ್ ಹೇಳಿದರು. ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಸುಂಟಿಕೊಪ್ಪ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಭಾಷಣ ಕಲೆ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದÀರು. ಸಭೆಗಳಿಗೆ ವೇದಿಕೆಯನ್ನು ಸಿದ್ಧಪಡಿಸುವಾಗ ಅಧ್ಯಕ್ಷರು ಮತ್ತು ಅತಿಥಿಗಳಿಗೆ ಸೂಕ್ತ ರೀತಿಯಲ್ಲಿ ಆಸನಗಳನ್ನು ಸಿದ್ಧಪಡಿಸುವುದರೊಂದಿಗೆ ಅತಿಥಿಗಳು ಅಸೀನರಾಗುವಂತೆ ನೋಡಿಕೊಳ್ಳುವುದು ಕಾರ್ಯಕ್ರಮದ ಆಯೋಜಕರು ನಿರ್ವಹಿಸಬೇಕಾದ ಆದ್ಯ ಕರ್ತವ್ಯವಾಗಿದೆ. ಇದರಿಂದ ಸಮಾರಂಭವು ಯಶಸ್ವಿಗೊಳಿಸುತ್ತದೆ ಎಂದು ಅವರು ಹೇಳಿದರು. ಸುಂಟಿಕೊಪ್ಪ ಗ್ರಾ.ಪಂ ಸದಸ್ಯ ಪಿ.ಎಫ್.ಸಬಾಸ್ಟೀನ್ ಮಾತನಾಡಿ, ಭಾಷಣ ಕಲೆಯನ್ನು ಕರಗತ ಮಾಡಿಕೊಂಡು ಧೈರ್ಯದಿಂದ ಮುಂದುವರಿಯಬೇಕು. ನಮ್ಮೊಳಗಿರುವ ಕಿಳಾರಿಮೆ ತೊಡೆದು ಹಾಕಬೇಕು, ಯಾವುದೇ ವಿಚಾರದ ಮಾತನಾಡುವಾಗ ಆದರ ಪೂರ್ವಪರ ಅರಿತು ಮಾಹಿತಿ ಸಂಗ್ರಹಿಸಿ ಧೈರ್ಯ ಅಭಿವ್ಯಕ್ತಿ ಮಾಡಬೇಕೆಂದರು. ಮಕ್ಕಳು ಶಿಕ್ಷಣ ಪಡೆದು ವೃತಿ ಜೀವನಕ್ಕೆ ಕಾಲಿಟ್ಟಾಗ ನಿಮ್ಮನ್ನು ಸಲುಹಿದ ಪೋಷಕರನ್ನು ನಿರ್ಲಕ್ಷಿಸಬೇಡಿ. ಪಾಠಪ್ರವಚನ ನೀಡಿದ ಶಿಕ್ಷಕ ಮತ್ತು ಗುರು ಹಿರಿಯರನ್ನು ಗೌರವಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಗ್ರಾ.ಪಂ ಮಾಜಿ ಉಪಾಧ್ಯಕ್ಷ ಬಿ.ಎಸ್.ಸದಾಶಿವ ರೈ ಮಾತನಾಡಿ, ನಿಮ್ಮ ಸುತ್ತ ಮುತ್ತಲಿನಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಅವರಿಗೆ ತುರ್ತು ಚಿಕಿತ್ಸೆಗೆ ಹಣದ ಅವಶ್ಯಕತೆ ಕಂಡು ಬಂದಲ್ಲಿ ಸರ್ಕಾರದಿಂದ ಹಲವಾರು ಸವತ್ತುಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಯಾವ ರೀತಿಯಿಂದ ಮಾಹಿತಿ ನೀಡುವ ಮೂಲಕ ಸ್ಪಂದಿಸಬಹುದಾಗಿದೆ. ವಯೋವೃದ್ಧರಿಗೆ ಮಾಸನ ದೊರೆಯುತ್ತಿದೆಯೆ ಎಂಬುದನ್ನು ಅರಿತುಕೊಂಡು ಅವರಿಗೆ ಸಂಬಂಧಿಸಿದ ಇಲಾಖೆಗಳಿಗೆ ತೆರಳಿ ಅರ್ಜಿಸಲ್ಲಿಸುವ ಮೂಲಕ ಹಿರಿಯ ಜೀವಿಗಳಿಗೆ ಸರ್ಕಾರದ ಸೌಲಭ್ಯ ದೊರೆಯುವ ಮಾಸನ ಫಲಾನುಭವಿಗಳಾಗಿ ಮಾಡಬಹುದಾಗಿದೆ. ಸಮಾರಂಭದ ಅಧ್ಯಕ್ಷತೆಯನ್ನು ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮೋಹನ್ ಹೆಗ್ಡೆ ವಹಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕಿ ಪ್ರಪುಲ್ಲ ಕುಮಾರಿ, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿ ಎನ್.ಎನ್À.ಮನೋಹರ್ ಹಾಜರಿದ್ದರು.