ಮಡಿಕೇರಿ NEWS DESK ಅ.2 : ಥೈಲ್ಯಾಂಡ್‌ನಿಂದ ದುಬೈ ಮತ್ತು ಕೇರಳಕ್ಕೆ ತನ್ನ ಸಹಚರರೊಂದಿಗೆ ಹೈಡ್ರೋ ಗಾಂಜಾವನ್ನು ಸಾಗಿಸುತ್ತಿದ್ದ ಡ್ರಗ್ ಪೆಡ್ಲರ್ ನನ್ನು ಬಂಧಿಸಲಾಗಿದೆ. ಇದು ಕೊಡಗು ಪೊಲೀಸರ ಯಶಸ್ವೀ ಕಾರ್ಯಾಚರಣೆಯಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ನೀಡಿದರು.











