ಮಡಿಕೇರಿ ಅ.2 NEWS DESK : ಮಡಿಕೇರಿ ದಸರಾದಲ್ಲಿ ಈ ವಷ೯ದಿಂದ ಕಾಫಿ ದಸರಾ ಎಂಬ ವಿನೂತನ ಕಾಯ೯ಕ್ರಮವನ್ನು ಜಾರಿಗೊಳಿಸಲಾಗುತ್ತಿದ್ದು, ಅ.6 ಮತ್ತು 7 ರಂದು ಆಯೋಜಿತ ಕಾಫಿ ದಸರಾದಲ್ಲಿ ಕಾಫಿ ಮತ್ತು ಇತರ ಕೃಷಿಗೆ ಸಂಬಂಧಿಸಿದ ಅನೇಕ ಮಾಹಿತಿ ಕೃಷಿಕರಿಗೆ ದೊರಕಲಿದೆ. ಅಲ್ಲದೆ ಜಿಲ್ಲೆಯ 7 ಮಂದಿ ಸಾಧಕ ಕೃಷಿಕರನ್ನೂ ಕಾಫಿ ದಸರಾ ಸಂದಭ೯ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ತಿಳಿಸಿದ್ದಾರೆ. ನಗರದಲ್ಲಿ ಕಾಫಿ ದಸರಾ ಸಂಬಂಧಿತ ಪೂವ೯ಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಡಾ.ಮಂಥರ್ ಗೌಡ, ಇದೇ ಮೊದಲ ಬಾರಿಗೆ ಆಯೋಜಿತವಾಗಿರುವ ಕಾಫಿ ದಸರಾಕ್ಕೆ ಕಾಫಿ ಮಂಡಳಿ, ಕನಾ೯ಟಕ ಪ್ಲಾಂಟಸ್೯ ಅಸೋಸಿಯೇಷನ್, ಕೊಡಗು ಪ್ಲಾಂಟಸ್೯ ಅಸೋಸಿಯೇಷನ್ ಸೇರಿದಂತೆ ಕಾಫಿ ವಲಯದಿಂದ ಉತ್ತಮ ಸ್ಪಂದನ ದೊರಕಿದೆ. ಈಗಾಗಲೇ 32 ಮಳಿಗೆಗಳು ಭತಿ೯ಯಾಗಿದ್ದು, ಕಾಫಿ, ಹೈನುಗಾರಿಕೆ, ಬಿದಿರು, ತೋಟಗಾರಿಕಾ ಬೆಳೆಗಳು, ಯಂತ್ರೋಪಕರಣಗಳಿಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಈ ಮಳಿಗೆಗಳಲ್ಲಿ ದೊರಕಲಿದೆ. ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಮೀನುಗಾರಿಕಾ ಇಲಾಖೆ, ಪಶುಪಾಲನಾ ಇಲಾಖೆ, ಚೆಟ್ಟಳ್ಳಿಯ ತೋಟಗಾರಿಕಾ ಸಂಶೋಧನಾ ಕೇಂದ್ರ ಸೇರಿದಂತೆ ಅನೇಕ ಇಲಾಖೆಗಳು ಕಾಫಿ ದಸರಾದಲ್ಲಿ ಮಳಿಗೆಗಳು 6 ಮತ್ತು 7 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತೆರೆದಿರುತ್ತವೆ ಎಂದರು. ಅ.6 ರಂದು ಬೆಳಗ್ಗೆ 10 ಗಂಟೆಗೆ ರಾಜ್ಯ ಕೃಷಿ ಸಚಿವ ಚೆಲುವರಾಯ ಸ್ವಾಮಿ ಗಾಂಧಿ ಮೈದಾನದಲ್ಲಿ ಕಾಫಿ ದಸರಾ ಕಾಯ೯ಕ್ರಮ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಕಾಫಿ ಮತ್ತು ಕೃಷಿ ಸಂಬಂಧಿತ ವಿಚಾರಸಂಕಿರಣ ನಡೆಯಲಿದ್ದು, ಭಾರತೀಯ ಕಾಫಿ ಮಂಡಳಿ ಅಧ್ಯಕ್ಷರಾದ ದಿನೇಶ್ ದೇವವೃಂದ, ಕನಾ೯ಟಕ ಪ್ಲಾಂಟಸ್೯ ಅಸೋಸಿಯೇಷನ್ ಅಧ್ಯಕ್ಷ ಕೆ.ರಾಜೀವ್, ಕೊಡಗು ಪ್ಲಾಂಟಸ್೯ ಅಸೋಸಿಯೇಷನ್ ಅಧ್ಯಕ್ಷ ನಂದಾಬೆಳ್ಯಪ್ಪ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಅಂದು 11 ಗಂಟೆಯಿಂದ 12.30 ಗಂಟೆಯವರೆಗೆ ವಿಚಾರಸಂಕಿರಣದಲ್ಲಿ ಕೃಷಿ ರಂಗದ ಪರಿಣಿತರಾದ ಧಮ೯ರಾಜ್, ಡಾ.ಕೆಂಚರೆಡ್ಡಿ, ಕೆ ಕೆ ವಿಶ್ವನಾಥ್ ಮಾಹಿತಿ ವಿನಿಮಯ ಮಾಡಲಿದ್ದಾರೆ ಎಂದೂ ಶಾಸಕರು ಮಾಹಿತಿ ನೀಡಿದರು. ಅ.7 ರಂದು ಸೋಮವಾರ ಕೂಡ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮಳಿಗೆಗಳು ತೆರೆದಿರುತ್ತವೆ. ಕಲಾಸಂಭ್ರಮ ವೇದಿಕೆಯಲ್ಲಿ ನಡೆಯುವ ವಿಚಾರಗೋಷ್ಟಿಯಲ್ಲಿ ನಡಿಕೇರಿಯಂಡ ಬೋಸ್ ಮಂದಣ್ಣ, ಖಲಿಸ್ತಾ ಡಿಸೋಜಾ, ಡಾ.ಶಿವಪ್ರಸಾದ್, ಮಿಲನಾ ಭರತ್ ಮಾಹಿತಿ ವಿನಿಮಯ ಮಾಡಲಿದ್ದಾರೆ. ಅಂದು ರಾಜ್ಯ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಕೊಡಗು ಜಿಲ್ಲೆಯ ಸಾಧಕ ಕೃಷಿಕರಿಗೆ ಸನ್ಮಾನದ ಗೌರವ ನೆರವೇರಿಸಲಿದ್ದಾರೆ ಎಂದು ಮಂಥರ್ ಗೌಡ ತಿಳಿಸಿದರು. ಕೊಡಗು ಜಿಲ್ಲೆಯ ಕೃಷಿಕರು, ಸಾವ೯ಜನಿಕರು ಈ ಕಾಫಿ ದಸರಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾಫಿ ಮತ್ತು ಕೃಷಿ ರಂಗದ ಮಾಹಿತಿ ಪಡೆದುಕೊಳ್ಳುವಂತೆಯೂ ಶಾಸಕರು ಕೋರಿದರು. ಜಿಲ್ಲಾಧಿಕಾರಿ ಮತ್ತು ಮಡಿಕೇರಿ ದಸರಾ ಸಮಿತಿ ಅಧ್ಯಕ್ಷವೆಂಕಟರಾಜಾ ಮಾತನಾಡಿ, ಕಾಫಿ ದಸರಾವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಅಗತ್ಯ ಸಹಕಾರ ನೀಡೇಕೆಂದು ಸೂಚಿಸಿದರು. ಗುಣಮಟ್ಟದ ಮಳಿಗೆಗಳನ್ನು ನಿಮಿ೯ಸಲಾಗುತ್ತದೆ, ಪ್ರತೀ ಮಳಿಗೆಯಲ್ಲಿಯೂ ಸೂಕ್ತ ಮಾಹಿತಿ ಹಾಕಲಾಗುತ್ತದೆ, ಕರಪತ್ರ ನೀಡುವದಕ್ಕೆ ಸೀಮಿತರಾಗದೇ ಪ್ರತೀ ಇಲಾಖೆಗಳೂ ಸಕಾ೯ರದಿಂದ ಕೖಷಿಕರಿಗೆ ದೊರಕುವ ಸೌಲಭ್ಯಗಳು, ಅದನ್ನು ಪಡೆಯುವ ರೀತಿಯನ್ನು ಪರಿಣಾಮಕಾರಿಯಾಗಿ ತಿಳಿಸುವಂತೆ ಸೂಚಿಸಿದರು. ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ, ಕಾಫಿ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ಮಾತನಾಡಿ, 11 ವಷ೯ದ ಹಿಂದೆ ದಸರಾಕ್ಕೆ ಮಕ್ಕಳ ದಸರಾ ಸೇಪ೯ಡೆಯಾಗಿತ್ತು, 7 ವಷ೯ಗಳ ಹಿಂದೆ ಮಹಿಳಾ ದಸರಾ ಸೇಪ೯ಡೆಯಾಯಿತು, 5 ವಷ೯ದ ಮೊದಲು ಜಾನಪದ ದಸರಾ ಸೇಪ೯ಡೆಯಾಯಿತು, ಇದೀಗ ಕಾಫಿ ದಸರಾದ ಮೂಲಕ ನಾಡಹಬ್ಬದಲ್ಲಿ ಕೃಷಿಕರಿಗೂ ಪ್ರಯೋಜನಕಾರಿ ಮಾಹಿತಿ ಲಭಿಸುತ್ತಿರುವುದು ಶ್ಲಾಘನೀಯ. ದಸರಾ ಸಮಿತಿ, ಜಿಲ್ಲಾಡಳಿತ ಸಹಕಾರದಲ್ಲಿ ಎಲ್ಲಾ ಕಾಯ೯ಕ್ರಮಗಳನ್ನೂ ಈ ಬಾರಿಯೂ ಅತ್ಯಂತ ವ್ಯವಸ್ಥಿತವಾಗಿ ನಿವ೯ಹಿಸಿಕೊಂಡು ಹೋಗಲಾಗುತ್ತದೆ ಎಂದರು, ಕಾಫಿ ದಸರಾದಲ್ಲಿ ಜಿಲ್ಲೆಯ ಅನೇಕ ಕೆಫೆಗಳು ತಮ್ಮ ಮಳಿಗೆ ತೆರೆಯುತ್ತಿದ್ದು ಕಾಫಿಯ ಸ್ವಾದಿಷ್ಟ ಘಮಲು ಗಾಂಧಿ ಮೈದಾನದಲ್ಲಿ ಕಂಡುಬರಲಿದೆ. ಕಾಫಿ ಕೆಫೆಯು ಯುವಪೀಳಿಗೆಯ ಮನ ಸೆಳೆದರೆ ಕೃಷಿ ಮಳಿಗೆಗಳು ಎಲ್ಲಾ ವಗ೯ದವರ ಗಮನ ಸೆಳೆಯುವಂತಿರಲಿದೆ ಎಂದರು. ಸ್ಥಳಾವಕಾಶ ಲಭ್ಯವಿಲ್ಲದ ಕಾರಣ 32 ಮಳಿಗೆಗಳಿಗೆ ಮಾತ್ರ ಜಾಗ ನೀಡಲಾಗಿದೆ, ಸಾಕಷ್ಟು ಸಂಖ್ಯೆಯಲ್ಲಿ ಮಳಿಗೆಗಳಿಗೆ ಬೇಡಿಕೆ ಇದ್ದರೂ ಸ್ಥಳಾವಕಾಶ ಕಡಮೆ ಇರುವ ಹಿನ್ನಲೆಯಲ್ಲಿ ಹೆಚ್ಚಿನ ಮಳಿಗೆಗಳಿಗೆ ಜಾಗ ನೀಡಲಾಗಿಲ್ಲ ಎಂದರು. ದಸರಾ ಸಮಿತಿ ಕಾಯಾ೯ಧ್ಯಕ್ಷ ಪ್ರಕಾಶ್ ಆಚಾಯ೯, ಪ್ರಧಾನ ಕಾಯ೯ದಶಿ೯ ರಾಜೇಶ್ ಬಿ.ವೈ, ಖಜಾಂಚಿ ಅರುಣ್ ಶೆಟ್ಟಿ ಕಾಫಿ ಮಂಡಳಿ ಉಪನಿದೇ೯ಶಕರು ತೋಟಗಾರಿಕೆ, ಕೃಷಿ, ಕೈಗಾರಿಕೆ, ಪಶುಪಾಲನಾ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು, ಕೊಡಗು ಪ್ಲಾಂಟಸ್೯ ಅಸೋಯಿಯೇಷನ್ ಅಧ್ಯಕ್ಷ ನಂದಾಬೆಳ್ಯಪ್ಪ ನಿದೇ೯ಶಕ ಕೆ.ಕೆ.ವಿಶ್ವನಾಥ್, ಕಾಯ೯ದಶಿ೯ ಬೆಳ್ಯಪ್ಪ, ಕನಾ೯ಟಕ ಪ್ಲಾಂಟಸ್೯ ಅಸೋಸಿಯೇಷನ್ ಅಧ್ಯಕ್ಷ ಕೆ.ರಾಜೀವ್ ಸೇರಿದಂತೆ ಅನೇಕ ಬೆಳೆಗಾರರು ಸಭೆಯಲ್ಲಿದ್ದರು. ಇದೇ ಸಂದಭ೯ ಕಾಫಿ ದಸರಾ ಲೋಗೋವನ್ನು ಶಾಸಕರು, ಜಿಲ್ಲಾಧಿಕಾರಿಗಳು ಬಿಡುಗಡೆಗೊಳಿಸಿದರು.
ಕಾಫಿ ದಸರಾ ಸನ್ಮಾನಿತ ಸಾಧಕರು :: ನಡಿಕೇರಿಯಂಡ ಬೋಸ್ ಮಂದಣ್ಣ, ಸುಂಟಿಕೊಪ್ಪ, (ಕಾಫಿ ಕೖಷಿ ಸಾಧನೆ) ಬಿ.ಪಿ.ರವಿಶಂಕರ್, ಪೊನ್ನಂಪೇಟೆ ( ಸಮಗ್ರ ಕೃಷಿಕ) , ಜೆಮಿ೯ ಡಿಸೋಜಾ ಕುಶಾಲನಗರ, (ಕಾಫಿ ಕೃಷಿ) ನಿಖಿಲ್ ರಾಮಮೂತಿ೯ , ಕರಡ, (ಬಿದಿರು ಕೃಷಿ) ಕೊಡಗು ಮಹಿಳಾ ಕಾಫಿ ಜಾಗ್ರತಿ ಸಂಘ, (ಸಂಘಕ್ಕಾಗಿನ ಪ್ರಶಸ್ತಿ) , ವಿ.ಎ.ತಾಹೀರ್ ಮಡಿಕೇರಿ, ( ಯಂತ್ರೋಪಕರಣಗಳ ತಯಾರಿಕೆಗಾಗಿ) ಶಿರಗಜೆ ಮಾದಪ್ಪ, ಭಾಗಮಂಡಲ ( ಜೇನು ಕೃಷಿ)