ಸೋಮವಾರಪೇಟೆ ಅ.7 NEWS DESK : ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರಕ್ಕೆ ಒತ್ತಡ ತರಬೇಕು ಎಂದು ಸೋಮವಾರಪೇಟೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಎಂ.ದಿನೇಶ್ ಆಗ್ರಹಿಸಿದರು. ಕೂತಿ ಗ್ರಾಮದ ಸಮುದಾಯಭವನದಲ್ಲಿ ನಡೆದ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಅವರೊಂದಿಗೆ ನಡೆದ ರೈತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರರ ಸಂಕಷ್ಟವನ್ನು ಹೇಳಿದರು. ಕಾಫಿಯನ್ನು ಆಹಾರ ಬೆಳೆಯೆಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದರೆ ಮಾತ್ರ, ಕಾಫಿ ಬೆಳೆಗಾರರಿಗೆ ಸೂಕ್ತ ಸೌಲಭ್ಯಗಳು ಸಿಗುತ್ತವೆ. ವಿಶೇಷ ಸವಲತ್ತುಗಳನ್ನು ಒದಗಿಸದಿದ್ದರೆ ಮುಂದಿನ ಕೆಲವೇ ವರ್ಷಗಳಲ್ಲಿ ಕೊಡಗಿನ ಕಿತ್ತಳೆಯಂತೆ ಕಾಫಿಯೂ ಕಣ್ಮರೆಯಾದರೂ ಆಶ್ಚರ್ಯಪಡಬೇಕಾಗಿಲ್ಲ ಎಂದು ಹೇಳಿದರು. ಕಾಫಿ ಹೂ ಅರಳುವ ಸಂದರ್ಭದಲ್ಲಿ ನಿಗದಿತ ಸಮಯದಲ್ಲಿ ಹೂಮಳೆ ಬೀಳುವುದಿಲ್ಲ. ಮತ್ತು ಬ್ಯಾಕಿಂಗ್ ಮಳೆ ಸಿಗುವುದಿಲ್ಲ. ಈ ಕಾರಣದಿಂದ ಬಹುತೇಕ ಸಣ್ಣ ಬೆಳೆಗಾರರು ಬೋರ್‍ವೆಲ್‍ಗಳಿಂದ ನೀರನ್ನು ಹಾರಿಸಿ, ಕಾಫಿ ಹೂ ಅರಳಿಸಬೇಕಾಗಿದೆ. ಈ ಕಾರಣದಿಂದ ಸಂಕಷ್ಟದಲ್ಲಿರುವ ಸಣ್ಣ ಕಾಫಿ ಬೆಳೆಗಾರರ ಎಲ್‍ಟಿ4ಸಿ ಪಂಪ್‍ಸೆಟ್‍ಗಳಿಗೆ ಯಾವುದೇ ಷರತ್ತುಗಳಿಲ್ಲದೆ ಉಚಿತ ವಿದ್ಯುತ್ ಕಲ್ಪಿಸಿಬೇಕು. ಪಂಪ್‍ಸೆಟ್‍ಗಳ ಬಾಕಿಯಿರುವ ವಿದ್ಯುತ್ ಬಿಲ್ ಮನ್ನಾ ಮಾಡಬೇಕು. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ರೈತ ಸಂಘದ ಉಪಾಧ್ಯಕ್ಷ ಹೆಗ್ಗುಳ ಹೂವಯ್ಯ ಮನವಿ ಮಾಡಿದರು. ರೋಗಬಾಧೆ ನಿಯಂತ್ರಣಕ್ಕೆ ಸಾವಯವ ಮಾದರಿಯ ಕೀಟ ನಾಶಕಗಳ ಸಂಶೋಧನೆಯಾಗಬೇಕು. ಕಾಫಿ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಕಾಫಿಗೆ ಆಂತಾರೀಕ ಮಾರುಕಟ್ಟೆ ಕಲ್ಪಿಸಲು ಯೋಜನೆ ರೂಪಿಸಬೇಕು, ಕಾಫಿ ಬೆಳೆಗಾರರಿಗೆ ನೀಡುತ್ತಿರುವ ಸಹಾಯಧನದ ಮೊತ್ತ ಹೆಚ್ಚಿಸಬೇಕು. ಸಹಾಯಧನ ಪಡೆಯಲು ರೂಪಿಸಿರುವ ಷರತ್ತುಗಳಿಂದ ಸಣ್ಣ ಬೆಳೆಗಾರರು ಸಹಾಯಧನ ಪಡೆಯಲು ಸಾಧ್ಯವೆ ಇಲ್ಲ. ಷರತ್ತುಗಳನ್ನು ಸರಳೀಕರಣಗೊಳಿಸಬೇಕು. ಸಣ್ಣ ಕಾಫಿ ಬೆಳೆಗಾರರ ಮಕ್ಕಳಿಗೆ ವಿದ್ಯಾರ್ಥಿವೇತನ ಕಲ್ಪಿಸಬೇಕು. ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಬೆಳೆಗಾರರು ಆಗ್ರಹಿಸಿದರು. ಕಾಫಿ ಮಂಡಳಿ ಬೆಳೆಗಾರರ ಸ್ನೇಹಿಯಾಗಿ ಕೆಲಸ ಮಾಡುತ್ತಿದೆ. ಸಾಲಮನ್ನಾ, ಉಚಿತ ವಿದ್ಯುತ್ ನೀಡುವುದು ಇವೆಲ್ಲಾ ಅವಶ್ಯಕ ಬೇಡಿಕೆಗಳಾಗಿದ್ದು, ಈಡೇರಿಸುವುದಕ್ಕೆ ಪ್ರಯತ್ನಿಸಲಾಗುವುದು ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಹೇಳಿದರು. ಇದುವರಗೆ ಕಾಫಿ ತೋಟದ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, ಬೆಳೆಗಾರರ ಮಕ್ಕಳಿಗೂ ವಿದ್ಯಾರ್ಥಿ ವೇತನ ನೀಡಲು ಚರ್ಚೆ ನಡೆಸಲಾಗುವುದು. ಭಾರತೀಯ ಸೇನೆಗೆ ಕಾಫಿ ಪರಿಚಯಿಸಲು ಸಿಆಈಜತೆ ನಡೆಯುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಫಿ ಮಂಡಳಿ ಸದಸ್ಯ ಕಿಶೋರ್, ಮಾಜಿ ಎಂಎಲ್‍ಸಿ ಎಸ್.ಜಿ.ಮೇದಪ್ಪ, ಕೂತಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಜಯರಾಮ್, ಕಾಫಿ ಬೆಳೆಗಾರರಾದ ಡಾ.ನವೀನ್ ಕುಮಾರ್, ರಂಜಿತ್, ಎಂ.ಬಿ.ಅಭಿಮನ್ಯುಕುಮಾರ್, ಎ.ಆರ್. ಕುಶಾಲಪ್ಪ ಇದ್ದರು.